ಅಂಗಡಿ ಮಳಿಗೆಗಳ ಹರಾಜು

0
154

ಕೋಲಾರ/ಬಂಗಾರಪೇಟೆ: ನಗರದ ಪ್ರಖ್ಯಾತಿ ಗೊಂಡಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ವಾಣಿಜ್ಯ ಅಂಗಡಿ ಮಳಿಗೆಗಳ ಹರಾಜು ಹಾಕಲಾಯಿತು. ಹರಾಜು ಪ್ರಕ್ರಿಯೆಯಲ್ಲಿ ನೂರಾರು ಮಂದಿ  ಸಾರ್ವಜನಿಕರು ಭಾಗವಹಿಸಿದ್ದರು. ಸುಮಾರು 150 ಕ್ಕೂ ಹೆಚ್ಚು ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಹರಾಜಿನಲ್ಲಿ ತೀವ್ರ ಪೈಪೋಟಿ ಉಂಟಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹರಾಜು ಪ್ರಕ್ರಿಯೆ ನಡೆದಿದೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ತಹಸೀಲ್ದಾರ್ ಸತ್ಯಪ್ರಕಾಶ್, ಪುರಸಭೆ ಸದಸ್ಯ ಅರುಣಾಚಲಂಮಣಿ, ಪಿಎಸ್ಐ ರವಿಕುಮಾರ್ ಇತರರು ಇದ್ದರು.

 

LEAVE A REPLY

Please enter your comment!
Please enter your name here