ಅಂಗನವಾಡಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ..

0
80

ಚಾಮರಾಜನಗರ:ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸುವ ಸರ್ಕಾರದ ನಡೆಯನ್ನ ವಿರೋಧಿಸಿ ಅಂಗನವಾಡಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ.ನಗರದ ಶ್ರೀಚಾಮರಾಜೇಶ್ವರ ದೇವಾಲಯದಿಂದ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಛೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು.

ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಿಂದ, ಜಿಲ್ಲಾಡಳಿತದವರೆಗೆ, ಸುಮಾರು ೨೦೦೦ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧ್ಯಂತ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ರು. ಎಲ್.ಕೆ.ಜಿ.ಯು.ಕೆ.ಜಿ ತರಗತಿಗನ್ನ ಅಂಗನವಾಡಿಯಲ್ಲೇ ಪ್ರಾರಂಭ ಮಾಡಬೇಕು. ಪಾರ್ಸಲ್ ರೂಪದಲ್ಲಿ ಮಕ್ಕಳಿಗೆ ಆಹಾರ ವಿತರಿಸುವ ಸರ್ಕಾರದ ನೀತಿ ಖಂಡನೀಯ.ಯಾಕಂದ್ರೆ ಈ ನೀತಿಯಿಂದ ಅಂಗನವಾಡಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತೆ. ಇದರಿಂದ ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗುತ್ತೆ.ಈ ರೀತಿ ಮಾಡುವುದರಿಂದ ಅಂಗನವಾಡಿ ಕಾರ್ಯಕರ್ತರು ಬೀದಿ ಪಾಲಾಗಬೇಕಾಗುತ್ತದೆ.
ಈಗಲೇ ನಮಗೆ ಸರಿಯಾದ ರೀತಿಯಲ್ಲಿ ಸಂಬಳ ಸಿಗುತ್ತಿಲ್ಲ.ಕನಿಷ್ಠ ವೇತನ ನೀಡುವುದಾಗಿ ಹೇಳಿ ಇನ್ನೂ ಅದರ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ.
ಎಷ್ಟೋ ಕಡೆ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ, ಅಂಗನವಾಡಿ ಮುಚ್ಚಿಹೋಗಿವೆ.ಇಂತಹ ಸರ್ಕಾರದ ನೀತಿಯಿಂದ ನಮ್ಮ ಅಭದ್ರತೆ ಎದ್ದು ಕಾಣುತ್ತಿದ್ದೆ
ಆದುದರಿಂದ ಇದನ್ನ ಕೈ ಬಿಡಬೇಕು, ಅಂಗನವಾಡಿಗೆ ಪ್ರಾಮುಖ್ಯತೆಯನ್ನ ನೀಡಬೇಕು.
ಈ ಎಲ್ಲಾ ವಿಚಾರಗಳನ್ನ ಮುಂದಿಟ್ಟುಕೊಂಡು, ಜಿಲ್ಲಾಧ್ಯಂತ ಇಂದು ಅಂಗನವಾಡಿ ಕೇಂದ್ರಗಳನ್ನ ಬಂದ್ ಮಾಡಿ ಪ್ರತಿಭಟಿನೆ. ನಮ್ಮ ಬೇಡಿಕೆ ಈಡೇರೋವರೆಗೂ ದೇಶವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ರು.

LEAVE A REPLY

Please enter your comment!
Please enter your name here