ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಉದ್ಘಾಟನೆ

0
198

ಬಳ್ಳಾರಿ /ಹೊಸಪೇಟೆ.:ಎಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಘಟಕದ ಉದ್ಘಾಟನೆ ಇತ್ತೀಚೆಗೆ ಕಮಲಾಪುರ ಪಟ್ಟಣದಲ್ಲಿ ಜರುಗಿತು.
ಕಮಲಾಪುರ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಜರುಗಿದ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಆರ್.ಮಳಲಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಘಟಕದ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್, ಅಂಗನವಾಡಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಮುಕ್ತಿಯಾರ್ ಪಾಷಾ, ಸದಸ್ಯರಾದ ಹನುಮಂತ, ಮಸ್ತಾನ್ ಸಾಬ್, ಕಿರಣ್ ಕುಮಾರ್, ಮಲ್ಲಯ್ಯ, ಅಬ್ದುಲ್ ಜಂತೆ, ಫೆಡರೇಷನ್ ರಾಜ್ಯ ಸಮಿತಿ ಸದಸ್ಯೆ ನಾಗರತ್ನಮ್ಮ, ಸಂಡೂರು ಘಟಕದ ಅಧ್ಯಕ್ಷ ವೀರಣ್ಣ, ಹೊಸಪೇಟೆ ತಾಲೂಕು ಘಟಕದ ಗೌರವಾಧ್ಯಕ್ಷೆಎ.ಪಿ.ಫಾತೀಮಾಬಿ, ಅಧ್ಯಕ್ಷೆ ಜ್ಯೋತಿ ವಿ.ಮಾಳಗಿ, ಉಪಾಧ್ಯಕ್ಷೆ ಧರ್ಮದೇವತೆ, ಪ್ರಧಾನ ಕಾರ್ಯದರ್ಶಿ ಡಿ.ರಾಣಿ, ಜಂಟಿ ಕಾರ್ಯದರ್ಶಿ ಎನ್.ಮೌಲಾಬಿ, ಖಜಾಂಚಿ ಎಂ.ಅಂಬಿಕ, ಸಂಚಾಲಕಿ ಎ.ಲಕ್ಷ್ಮಿದೇವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here