ಅಂತರಾಷ್ಟ್ರೀಯ ಬೆಂಚ್‌ಪ್ರೆಸ್ ಚಾಂಪಿಯನ್ ಶಿಫ್‌ನಲ್ಲಿ ಚಿನ್ನದ ಪದಕ

0
219

ಬಳ್ಳಾರಿ / ಹೊಸಪೇಟೆ: ಇತ್ತೀಚಿಗೆ ಥೈಲ್ಯಾಂಡ್‌ನ ಪಟಾಯದಲ್ಲಿ ಜರುಗಿದ ಅಂತರಾಷ್ಟ್ರೀಯ ಬೆಂಚ್‌ಪ್ರೆಸ್ ಚಾಂಪಿಯನ್ ಶಿಫ್ ಕ್ರೀಡೆಯಲ್ಲಿ ನಗರದ ಐವರು ಕ್ರೀಡಾಪಟುಗಳು 4 ಚಿನ್ನ 1 ಕಂಚಿನ ಪದಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹೆಸರು ತಂದಿದ್ದಾರೆ.

ರಾಜೇಶ ಸುತ್ರಾವೆ 125 ಕೆ.ಜಿ.(ಎಂ-1)ಚಿನ್ನದ ಪದಕ, ಆನಂದ ಅರುಣ ಕುಮಾರ  90ಕೆಜಿ (ಎಂ-1)ಚಿನ್ನ, ಜಿ. ಹೂನ್ನೂರು ಸಾಹೇಬ್ 60ಕೆಜಿ (ಎಂ-2)ಚಿನ್ನ, ವಲಿಬಾಷಾ 67.5ಕೆಜಿ(ಎಸ್.ಆರ್) ಚಿನ್ನ ಹಾಗೂ ಎಂ. ಅಮೀರ್ ಜಾನ್ 90 ಕೆಜಿ (ಎಸ್.ಆರ್) ಕಂಚಿನ ಪದಕಗಳನ್ನು ಗಳಿಸಿ, ಸ್ವದೇಶಕ್ಕೆ ಮರಳಿದ್ದಾರೆ. ಅಮೋಘ ಸಾಧನೆ ಗೈದ ಕ್ರೀಡಾಪಟುಗಳನ್ನು ನಗರದ ಕ್ರೀಡಾಸಕ್ತರು, ಭವ್ಯವಾಗಿ ಸ್ವಾಗತ ಕೋರಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here