ಅಂತರಾಷ್ಟ್ರೀಯ ಮಹಿಳಾ ದಿನಾಚರಣ

0
229

ಬೆಂಗಳೂರು/ಕೃಷ್ಣರಾಜಪುರ: ಸಮಾಜದಲ್ಲಿ ಲಿಂಗ ಸಮಾನತೆಯನ್ನು ಬೇರೊಬ್ಬರಿಂದ ಗಳಿಸುವ ಅನಿವಾರ್ಯತೆ ಮಹಿಳೆಗಿಲ್ಲ ಅದು ಆಕೆಯ ಜನ್ಮಸಿದ್ದ ಹಕ್ಕು ಎಂದು ಮಾಜಿ ಶಾಶಕ ಎನ್.ಎಸ್.ನಂದೀಶ್ ರೆಡ್ಡಿ ಅಭಿಪ್ರಾಯ ಪಟ್ಟರು.

ಇಲ್ಲಿನ ವಿಜಿನಾಪುರ ವಾರ್ಡ್ ನ ಪಾಲಿಕೆ ಸದಸ್ಯರ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು ಅವರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ನಾಲ್ಕು ಕೋಣೆಗೆ ಸಿಮಿತವಾಗಿ ಮಕ್ಕಳು ಮತ್ತು ಗಂಡನ ಪೋಷಣೆಯಲ್ಲಿಯೇ ತಮ್ಮ ಜೀವ ಸವೆದಿದ್ದರು, ಹಲವು ರೀತಿಯ ಕಟ್ಟು ಪಾಡುಗಳಿಗೆ ಬದ್ಧರಾಗಿ, ಅವಲಂಬನೆಯ ಜೀವನ ನಡೆಸುತ್ತಿದ್ದರು, ಆದರೆ ಆಧುನಿಕ ಜಗತ್ತು ಮಹಿಳೆಯರಿಗೆ ಹಲವು ಅವಕಾಶಗಳನ್ನು ನೀಡುತ್ತಿದ್ದು, ಪುರುಷರಿಗೆ ಸಮನಾದ ಜೀವನ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ, ಶಿಕ್ಷಣ ಇಂದು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿದೆ, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ, ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಂದು ಮುಂದಿದ್ದಾರೆ, ಸಮಾಜದಲ್ಲಿ ಹಲವರು ಹೆಣ್ಣು ಮಗುವೆಂದರೆ ಋಣಾತ್ಮಕ ಚಿಂತನೆಯನ್ನೇ ಹೊಂದಿದ್ದಾರೆ, ಭ್ರೂಣ ಹತ್ಯೆಗಳು, ದೇಶದ ಹಲವೆಡೆ ನಡೆಯುತ್ತಿದ್ದು, ಇದರ ಕಡಿವಾಣಕ್ಕೆ ಸರ್ಕಾರ ಹಲವು ನೀತಿಗಳನ್ನು ಜಾರಿಗೆ ತರುತ್ತಿದೆ, ಸರ್ಕಾರ ಮಹಿಳೆಯರನ್ನು ಸಬಲೆಯಾಗಿಸಲು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ, ಗರ್ಭಿಣಿಯರಿಗೆ ವಿಶ್ರಾಂತಿ ರಜೆ, ತಾಯಿ ಮತ್ತು ಮಗುವಿನ ಮರಣವನ್ನು ತಡೆಯಲು ತೆಗೆದುಕೊಂಡಿರುವ ನಿರ್ಧಾರಗಳು ಉತ್ತಮ ಸಮಾಜವನ್ನು ರೂಪಿಸಲಿವೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಬಂಡೆ ರಾಜು, ಪೂರ್ಣಿಮಾ ಶ್ರೀನಿವಾಸ್, ಕ್ಷೇತ್ರಾಧ್ಯಕ್ಷ ಚಿದಾನಂದ, ಮಾಜಿ ಪಾಲಿಕೆ ಸದಸ್ಯರುಗಳಾದ ಗಿತಾ ವಿವೇಕಾನಂದ ಬಾಬು, ಸುಗುಮಾರ್, ಎಸ್.ಎಸ್.ಪ್ರಸಾದ್, ಶಿವರಾಜ್, ಇಂದ್ರಮ್ಮ, ಪ್ರೇಮ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here