ಅಂತರ್ಜಲ ವೃದ್ದಿಗಾಗಿ ವಿಶೇಷ ಪ್ರಯತ್ನ

0
161

ಬೆಂಗಳೂರು/ಮಹದೇವಪುರ:- ಬೆಂಗಳೂರು ಕ್ರಾಂಕ್ರೀಟ್ ಕಾಡಾಗಿರುವುದರಿಂದ ಮಳೆ ನೀರು ಭೂಮಿಯಲ್ಲಿ ಇಂಗದೆ ನೀರು ಪೋಲಾ ಗುತ್ತಿರುವುದನ್ನು ಮನಗಂಡ ಸಿಎಂಆರ್ ಕಾಲೇಜಿನ ವಿದ್ಯಾರ್ಥಿಗಳು ಅಂತರ್ಜಲ ವೃದ್ದಿಗಾಗಿ ವಿಶೇಷ ಪ್ರಯತ್ನ ಮಾಡಿ ಮಳೆ ನೀರು ಇಂಗುವಂತಹ ಪ್ರೀವಿಯಸ್ ಕಾಂಕ್ರೀಟ್ ಬ್ಲಾಕ್
ಗಳನ್ನು ಅವಿಷ್ಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಅಬಿವೃದ್ದಿ ಪಡಿಸಿರುವ ಈ ವಿಶೇಷ ಬ್ಲಾಕ್ ಗಳಿಗೆ ತಮ್ಮದೆ ಆದ ಪ್ರಮಾಣ, ಅನುಪಾತದಲ್ಲಿ ನೀರು, ಸಿಮೆಂಟ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಅಳವಡಿಸಿ ಸಿದ್ದಪಡಿಸಲಾಗಿದೆ. ಒಂದು ಬ್ಲಾಕ್ ಇಟ್ಟಿಗೆ ತಯಾರಿಸಲು 10 ರಿಂದ 15 ರೂ ವೆಚ್ಚ ವಾಗಲಿದ್ದು, ಈ ಬ್ಲಾಕ್ಗಳನ್ನು ಬೆಂಗಳೂರಿನ ಪಾರ್ಕಿಂಗ್, ಪುಟ್ಫಾತ್ ಮುಂತಾದ ಪ್ರದೇಶಗಳಲ್ಲಿ ಅಳವಡಿಸುವುದರಿಂದ ಮಳೆ ನೀರು ನೇರವಾಗಿ ಭೂಮಿಗೆ ಸೇರುವುದರಿಂದ ಅಂತರ್ಜಲ ಮಟ್ಟ ಹಾಗೂ ತಾಪಮಾನವನ್ನು ಸಮತೋಲನ ದಲ್ಲಿಡಲು ಸಹಕಾರಿಯಾಲಿದೆ ಎಂದು ವಿದ್ಯಾರ್ಥಿ ಗಳು ತಿಳಿಸಿದ್ದಾರೆ.

ಬೈಟ್: ನಂದಿನಿ, ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ.

ಬೈಟ್: ದಾನೇಶ್, ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ.

LEAVE A REPLY

Please enter your comment!
Please enter your name here