ಅಂತರ್ ರಾಜ್ಯ ಕಳ್ಳರ ಬಂಧನ..

0
126

ಚಿಕ್ಕಬಳ್ಳಾಪುರ / ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿದೆಡೆ ನಗರದ ಪ್ರತಿಷ್ಠಿತ ಬ್ಯಾಂಕುಗಳನ್ನ ಇವರ ಅಡ್ಡ ಮಾಡಿಕೊಂಡು ಬ್ಯಾಂಕಿಗೆ ಬರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಗ್ರಾಹಕರು ಹಣವನ್ನು ಡ್ರಾ ಮಾಡಿದ ನಂತರ ಅವರನ್ನ ಹಿಂಬಾಲಿಸಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರಿಂದ ಹಣವನ್ನು ಲಪಟಾಯಿಸುತ್ತಿದ್ದ ಖದೀಮರನ್ನ ಚಿಕ್ಕಬಳ್ಳಾಪುರ ಜಿಲ್ಲಾ ಪೋಲೀಸ್ ಅಧೀಕ್ಷಕರು ಕಾರ್ತಿಕ್ ರೆಡ್ಡಿ ,ಉಪಾದೀಕ್ಷಕರಾದ ಪ್ರಭುಶಂಕರ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಸ್ವಾಮಿ ಪಿ.ಎಸ್.ಐ ಗಳಾದ ಟಿ.ವೆಂಕಟೇಶ. ಓಂಪ್ರಕಾಶ್ ಗೌಡ.ರಾಮಪ್ರಸಾದ್ ಮತ್ತು ಸಿಬ್ಬಂದಿಯವರ ಕಾರ್ಯಾಚರಣೆಯಿಂದ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಓಜಿ.ಕುಪ್ಪಂ ಗ್ರಾಮದ ಸತೀಶ್ ಮತ್ತು ರಮಣ ಎಂಬ ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.ಬಂಧಿತರಿಂದ 08. ಪ್ರಕರಣಗಳಲ್ಲಿ ಸುಮಾರು 15 ಲಕ್ಷ ರೂ ನಗದು ಮತ್ತು ಒಂದು ದ್ವಿಚಕ್ರ ವಾಹನವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.ಇವರು ಇದೇ ತಿಂಗಳ13ರಂದು ಹಾರೋಬಂಡೆಯ ಹತ್ತಿರ ವ್ಯಕ್ತಿಯೊಬ್ಬರ ಬಳಿ 2 ಲಕ್ಷ ರೂ ಹಣವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ ಸಮಯದಲ್ಲಿ ಸಾರ್ವಜನಿಕರೇ ಈ ಇಬ್ಬರನ್ನ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.. ಬೆಂಗಳೂರಲ್ಲು ಸಹ ತಮ್ಮ ಕೈ ಚಳಕವನ್ನ ತೋರಿಸಿದ್ದಾರೆ ಅಲ್ಲೂ ಸಹ ಇವರ ಮೇಲೆ ಮೊಕದ್ದಮೆಗಳಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ರಕ್ಷಣಾದಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

 

ವರದಿ:ಅರಿಕೆರೆ ಮುನಿರಾಜು
ನಮ್ಮೂರು ಟಿವಿ,ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here