ಅಂತರ ಕಾಲೇಜು ಉತ್ಸವಕ್ಕೆ ಚಾಲನೆ

0
247

ಬಳ್ಳಾರಿ/ಹೊಸಪೇಟೆ:ಸ್ಥಳೀಯ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಕು.ಜಿ.ಸುಧಾ ಶಂಕರಗೌಡ ಮೆಮೋರಿಯಲ್ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಥಾಪಕರಾದ ಮಾಜಿ ಶಾಸಕ ದಿ.ಜಿ.ಶಂಕರಗೌಡ ರ 80ನೇ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ 2 ದಿನಗಳ ಅಂತರ ಕಾಲೇಜು ಮ್ಯಾನೇಜ್ ಮೆಂಟ್ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಥಿಯೋಸಾಫಿಕಲ್ ಮಹಿಳಾ ಕಾಲೇಜು ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಅಂತರ ಕಾಲೇಜು ಉತ್ಸವಕ್ಕೆ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ ಜೀರೆ, ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾಜಿ ಶಾಸಕ ದಿ.ಶಂಕರ ಗೌಡರು, ನೇರ ನಡೆ-ನುಡಿಯ ವ್ಯಕ್ತಿಯಾಗಿದ್ದರು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಇಂದಿನ ರಾಜಕಾರಣಿಗಳು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಭರಮಲಿಂಗನಗೌಡ, ಮಮತಾ ಭರಮಲಿಂಗನಗೌಡ, ಭೂಪಾಳ ರಾಘವೇಂದ್ರ ಶೆಟ್ಟಿ, ಥಿಯೋಸಾಫಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುಳಾ, ಪಿಯು ವಿಭಾಗದ ಪ್ರಾಚಾರ್ಯರಾದ ಜಗದೀಶ್, ಬಿಬಿಎ ಪ್ರಾಚಾರ್ಯರಾದ ಭಾಗ್ಯಲಕ್ಷ್ಮಿ ಭರಾಡೆ, ಪ್ರತಿಭಾ ಸುಧೀರ್, ರೂಪಾ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂತರ ಕಾಲೇಜು ಉತ್ಸವದ ಅಂಗವಾಗಿ ಚರ್ಚಾ ಸ್ಪರ್ಧೆ, ಮಾತುಕತೆ, ಪ್ರಬಂಧ ಸ್ಪರ್ಧೆ, ಭಾವಗೀತೆಗಳ ಗಾಯನ, ಚದುರಂಗ ಆಟ, ಕೆರಂ ಆಟ, ಅಯ್ಕೆ ವಿಷಯದ ಮಾತು ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.
ನಗರದ ಒಟ್ಟು 11 ಕಾಲೇಜುಗಳಿಂದ 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here