ಅಂತೂ…. ಬರದಜಿಲ್ಲೆಗೆ ಮಳೆಬಂತೂ…!

0
177
  • ಕೋಲಾರ : ಬರದ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ. ಅನೇಕ ರೈತರು ಮಳೆ,ಬೆಳೆ ಇಲ್ಲದೆ ,ಸಾಲಮಾಡಿ ೧೫೦೦ ಅಡಿ ಬೋರವೆಲ್ ಕೊರೆದರು ನೀರಿನ ಅಭಾವದಿಂದ ವ್ಯವಸಾಯದಲ್ಲಿನ ನಷ್ಟದಿಂದಾಗಿ ಆತ್ಮಹತ್ತೆ ಮೊರೆ ಹೋಗಿದ್ದರು.ಒಂದೊಂದು ಹನಿ ನೀರಿಗೂ ಕಷ್ಟಪಡುವ,ಒಂದು ಟ್ಯಾಂಕರ್ಗೆ ೬೦೦ ರೂ.ಗೂ ಅಧಿಕ ಹಣವನ್ನು ನೀಡಿದರೂ ನೀರಿಗೆ ಮಾತ್ರ ಆಹಾಕಾರ ಇದ್ದೇ ಇದೆ .ಇಂತಹ ಸಂದರ್ಭದಲ್ಲಿ ನಗರದಲ್ಲಿ ಆಲಿಕಲ್ಲು ಸಹಿತ ಮಳೆ ಬೀಳುತ್ತಿದ್ದು, ಜನರ ಜೀವನಕ್ಕೆ ಮತ್ತು ರೈತರ ಸಂಕಷ್ಟಗಳಿಗೆ ಮಳೆರಾಯ ವರದಾನವಾಗಿದ್ದಾನೆ.
    ಸುಮಾರು ೧ ಘಂಟೆಯಿಂದ ಸುದೀರ್ಘವಾಗಿ ಸುರಿದ ಮಳೆಯಿಂದಾಗಿ ಬೇಸಿಗೆಯ ಬಿಸಿಲಿನಿಂದ ಮುಕ್ತಿಗಾಗಿ ಹಾತೊರೆಯುತ್ತಿದ್ದ ಮನಸುಗಳಿಗೆ ಪರಮಾನಂದ ವಾಗಿದೆ.ಸತತವಾಗಿ ಜಿಲ್ಲೆಯಲ್ಲಿ ಇದೇ ರೀತಿ ವರುಣನ ಆರ್ಭಟ ಮುಂದುವರೆದು ಜನರಿಗೆ ವರಧಾನವಾಗಲಿ ಎಂದು ಆಶಿಸೋಣ.

LEAVE A REPLY

Please enter your comment!
Please enter your name here