ಅಂತೂ ಸಿಕ್ತು ಬಿಡಾಡಿ ದನಗಳಿಂದ ಮುಕ್ತಿ..

0
161

ಶಿವಮೊಗ್ಗ/ಸಾಗರ:ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿ ಬಿಟ್ಟಿದೆ.ಇದರಿಂದ ಸಾರ್ವಜನಿಕರು.
ವಾಹನ ಸವಾರರು ಹಲವು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದರು.ಇತ್ತಿಚೆಗೆ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳ ಕಾಳಗದಿಂದ ಓರ್ವ ಮೃತಪಟ್ಟಿದ್ದರು.ಹಲವು ಜನ ಗಾಯಾಳಾಗಿ ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಡಾಡಿ ದನಗಳಿಂದ ಊರಿನಲ್ಲಿ ಅಶಾಂತಿಯ ವಾತಾವರಣಗಳು ಕೂಡ ಉಂಟಾಗಿದ್ದು ಇದನ್ನರಿತ ಪೋಲೀಸ್ ಇಲಾಖೆ ಇಂದು ಮುಂಜಾನೆ ನಗರಸಭೆಯೊಂದಿಗೆ ಜಂಟೀ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಬಿಡಾಡಿ ದನಗಳ ಹಾವಳಿಯಿಂದ ಮುಕ್ತಿ ಕಾಣಿಸಿದ್ದಾರೆ. ಸಾಗರ ಟೌನ್ ವ್ಯಾಪ್ತಿಯಲ್ಲಿ 19 ಬಿಡಾಡಿ ದನಗಳನ್ನು ಹಿಡಿದು ನಗರ ಸಭೆ ಆವರಣಕ್ಕೆ ತಂದು ನಂತರ ದನಗಳ ಪೈಕಿ 8 ದನಗಳನ್ನು ವಾರಸುದಾರರು ಬಂದು ನಗರ ಸಭೆಗೆ ದಂಡ ಕಟ್ಟಿ ಇನ್ನು ಮುಂದಕ್ಕೆ ದನಗಳನ್ನು ರಸ್ತೆಗೆ ಬಿಡುವುದಿಲ್ಲ ಮನೆಯಲ್ಲಿಯೇ ಕಟ್ಟಿ ಸಾಕುತ್ತೇವೆ ಎಂದು ತಿಳಿಸಿ ತಮ್ಮ ದನಗಳನ್ನು ವಾಪಾಸು ಬಿಡಿಸಿಕೊಂಡು ಹೋಗಿದ್ದು ವಾರಸುದಾರರು ಯಾರು ಇಲ್ಲದ 11 ದನಗಳನ್ನು ಹೊಸನಗರದ ರಾಮಚಂದ್ರಾಪುರ ಮಠದ ಗೋಶಾಲೆಗೆ ಸೂಕ್ತ ಪೊಲೀಸ್ ಬೆಂಗಾವಲಿನಲ್ಲಿ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here