ಅಂಬೇಡ್ಕರ್ ಜನ್ಮ ದಿನಾಚರಣೆ..

0
150

ಚಿಕ್ಕಬಳ್ಳಾಪುರ/ಚಿಂತಾಮಣಿ:-ಶನಿವಾರ ಬಿಜೆಪಿ ಮುಖಂಡರಾದ ಟಿ.ಸಿ.ವೆಂಕಟೇಶ್ ರೆಡ್ಡಿ ಮತ್ತು ಮಾಡಿಕೆರೆ ಅರುಣ್ ಬಾಬು ಅವರ ನಿವಾಸ ಸೇರಿದಂತೆ ನಗರದ ಅಂಬೇಡ್ಕರ್ ಕಾಲೋನಿ ವೆಂಕಟಗಿರಿಕೋಟೆ ಕಾಲೋನಿಗಳಲ್ಲಿ ಹಾಗೂ ಹಲವು ಕಡೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಸಿ ವೆಂಕಟೇಶ್ ರೆಡ್ಡಿ ಮತ್ತು ಮಾಡಿಕೆರೆ ಅರುಣ್ ಬಾಬು ಅವರು ಸಂವಿಧಾನದ ಶಿಲ್ಪಿ ಹಾಗೂ ದೇಶದ ಹಲವು ತಳಮಟ್ಟದ ಸಮುದಾಯಗಳ ಹರಿಹಾರ ಎಂದೇ ಪ್ರಸಿದ್ಧರಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ 395 ಅನುಚ್ಛೇದಗಳೇ ನಮ್ಮ ಬದಕು ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ವಿಶ್ವದ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿದ್ದು, ಭಾರತದ ಸಂವಿಧಾನದಲ್ಲಿರುವ 395 ಅನುಚ್ಛೇದಗಳಲ್ಲಿ ಪ್ರತಿಯೊಂದು ಒಂದೊಂದು ಕಾನೂನು ತಿಳಿಸುತ್ತವೆ.ಈ ಎಲ್ಲಾ ಕಾನೂನು ಮನುಷ್ಯನ ಜೀವನದಲ್ಲಿ ಸದ್ಬಳಕೆ ಮಾಡಿಕೊಂಡರೆ ,ಪ್ರತಿಯೊಬ್ಬ ವ್ಯಕ್ತಿಯೂ ಜೀವನವನ್ನು ಉನ್ನತ ಮಟ್ಟದಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.ಸಂವಿಧಾನದ ಅನುಚ್ಛೇದಗಳು ನಮ್ಮ ಬದಕಿನ ದಾರಿದೀಪಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿ.ಸಿ.ವೆಂಕಟೇಶ್ ರೆಡ್ಡಿ ,ಮಾಡಿಕೆರೆ ಅರುಣ್ ಬಾಬು ,ಆಂಜನೇಯ ರೆಡ್ಡಿ ,ಕುರುಬೂರು ರಾಜಣ್ಣ ,ಶಿವಶಂಕರ್ ,ಪ್ರಸಾದ್ ,ರಮೇಶ್ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here