ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆಗೆ ಸಿದ್ಧತೆ..

0
360

ಬೆಂಗಳೂರು/ಕೃಷ್ಣರಾಜಪುರ:- ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾ.4 ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಸ್ಥಾಪನಾ ಸಿದ್ದತಾ ಸಮಿತಿಯ ಅಧ್ಯಕ್ಷ ಎಮ್.ವೆಂಕಟ ಸ್ವಾಮಿ ಗಂಗನಬೀಡು ತಿಳಿಸಿದ್ದಾರೆ.

ಐಟಿಐನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ತಾಲ್ಲೂಕಿನಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣ ಬಹುದಿನಗಳ ಬೇಡಿಕೆಯಾಗಿತ್ತು, ಸಮಿತಿ ಸದಸ್ಯರು, ಶಾಸಕರು ಮತ್ತು ಹಿತೈಶಿಗಳ ನೆರವಿನಿಂದ 15 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲಾಗಿದ್ದು, ಶೇಕಡ 80 ಕಂಚು ಮತ್ತು ಶೇಕಡ 20 ತಾಮ್ರ ಲೋಹದಿಂದ ನುರಿತ ದಾವಣಗೆರೆ ಮೂಲದ ಕಲಾವಿದರಿಂದ ನಿರ್ಮಿಸಲಾಗಿದೆ, ವಿಧಾನಸೌಧದ ಬಳಿಯ 12 ಅಡಿಯ ವಿಗ್ರಹಕ್ಕಿಂತ 3 ಅಡಿ ಎತ್ತರವಿದ್ದು 15 ಅಡಿಯಷ್ಟು ಎತ್ತರವಿದೆ, ರಾಜ್ಯದಲ್ಲೇ ಅತೀ ಎತ್ತರದ ಮೂರ್ತಿಯಾಗಿದೆ ಎಂದರು. ಭಾನುವಾರದಂದು ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿ ಅನಾವರಣ ಮಾಡಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎ.ಬಸವರಾಜ್ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮೇಯರ್ ಸಂಪತ್ ರಾಜ್, ಸಚಿವರಾದ ಹೆಚ್.ಆಂಜನೇಯ, ಮಹದೇವಪ್ಪ, ಕೆ.ಜೆ.ಜಾರ್ಜ್, ಟಿ.ಬಿ.ಜಯ ಚಂದ್ರ, ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ, ಮಹದೇವಪುರದ ಬಿ.ನಾರಾಯಣಪುರದಲ್ಲಿ 2009ರಲ್ಲಿ ಪ್ರಾರಂಭಗೊಂಡು ನೆನಗುದಿಗೆ ಬಿದ್ದಿರುವ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಗುವುದೆಂದರು. ಪೂರ್ವ ತಾಲ್ಲೂಕಿನಲ್ಲಿ ಒತ್ತುವರಿಯಿಂದ ತೆರವಾಗಿರುವ ಸ್ವತ್ತನ್ನು ಮೊರಾಜರ್ಿ, ಅಂಬೇಡ್ಕರ್ ವಸತಿ ಶಾಲೆಗಳ ಮಾದರಿ ವಸತಿಯೊಂದಿಗೆ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಮೀಸಲಿಡಬೇಕು, ಅಲ್ಲದೆ ತಾಲ್ಲೂಕಿನಾದ್ಯಂತಯಿರುವ ನಿರ್ಗಕತಿಕರಿಗೆ ನಿವೇಶನಗಳನ್ನು ಒದಗಿಸುವಂತೆಯೂ ಒತ್ತಾಯಿಸುವುದಾಗಿ ತಿಳಿಸಿದರು. ಎಸ್ಸ್ಸಿ,ಎಸ್ಟಿ ಜನಾಂಗದ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಪೂರ್ವ ತಾಲ್ಲೂಕಿನಲ್ಲಿರುವ ಐಟಿಬಿಟಿ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲು ಸರ್ಕಾರ ಮುತುವರ್ಜಿವಹಿಸಿ ಸಾಮಾಜಿಕ ನ್ಯಾಯವನ್ನು ಸಾಧರಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಸ್ಥಾಪನಾ ಸಿದ್ದತಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದೊಡ್ಡ ಯಲ್ಲಪ್ಪ, ಕಾರ್ಯಾಧ್ಯಕ್ಷ ಡಿ.ಎಮ್.ನಾಗರಾಜು, ರಾಮ ಚಂದ್ರ, ಸಹ ಕಾರ್ಯದರ್ಶಿ ಎಮ್.ಆರ್. ವೆಂಕಟೇಶ್, ಆರ್.ಮಹದೇವ್ ಸೇರಿ ಇತರರಿದ್ದರು.

LEAVE A REPLY

Please enter your comment!
Please enter your name here