ಅಂಬೇಡ್ಕರ್ ಮತ್ತು ಬಸವಣ್ಣರವರ ಜಯಂತಿ..

0
100

ಮಂಡ್ಯ/ ಮಳವಳ್ಳಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ದಲಿತ ಹಕ್ಕುಗಳ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಕ್ರಾಂತಿ ಕಾರಿ ಬಸವಣ್ಣ ನರವರ ಜಯಂತಿಯನ್ನು ಮಳವಳ್ಳಿ ಪಟ್ಟಣದ ರೈತ ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮ ವನ್ನು ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಎನ್ ನಾಗರಾಜು ರವರು ಡಾ.ಬಿ.ಆರ್ ಅಂಬೇಡ್ಕರ್ ರವರ ಹಾಗೂ ಕ್ರಾಂತಿಕಾರಿ ಬಸವಣ್ಣರವರ ವಿವಿಧ ಭಾವಚಿತ್ರ ವನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ,ಈ ಇಬ್ಬರು ಸಮಾನತೆಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ, ಬಸವಣ್ಣರವರು ಅನುಭವಮಂಟಪದಲ್ಲಿ ಎಲ್ಲಾ ಜನಾಂಗದವರನ್ನು ಒಗ್ಗೂಡಿಸಿ ಕೀಳು ಎಂಬ ಭಾವನೆ ಹೋಗಲಾಡಿಸಲು ಸಾಕಷ್ಟು ಹೋರಾಟ ನಡೆಸಿದರೆ , ಡಾ.ಬಿ ಆರ್ ಅಂಬೇಡ್ಕರ್ ರವರು ದೇಶಕ್ಕೆ ಸಂವಿದಾನವನ್ನು ರಚಿಸುವ ಮೂಲಕ ಸಮಾನತೆ ಸಾರಲು ಹೋರಾಟ ನಡೆಸಿದರು. ನಾವೆಲ್ಲರೂ ಅವರ ಹಾದಿಹೋಗಬೇಕಾಗಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ಹೆಣ್ಣು ಮಕ್ಕಳನ್ನು ಅಭಿವೃದ್ಧಿ ಮಾಡಲು ಇಬ್ಬರು ನಾಯಕರು ಮುಂದಾಗಿದ್ದರು. ಎಂದರು ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾಧ್ಯಕ್ಷ ಎಂ ಪುಟ್ಟಮಾಧು, ಜಿಲ್ಲಾ ಕಾರ್ಯದರ್ಶಿ ಹನುಮೇಶ್, ತಾಲ್ಲೂಕು ಅಧ್ಯಕ್ಷ ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ಎನ್ .ಶಿವಕುಮಾರ್, ಕುಮಾರಿ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here