ಅಕ್ಕಮಹೇದೇವಿ* ಪ್ರಶಸ್ತಿ ಪ್ರಕಟ

0
116

 

ಬಳ್ಳಾರಿ /ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶೀಲ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿ ಅವರಿಗೆ ರಾಜ್ಯ ಸರಕಾರವು ಕೊಡುವ ಇದೇ ಮೊದಲಬಾರಿಗೆ ಸ್ಥಾಪಿಸಿದ 2016 ನೇ ಸಾಲಿನ ವಚನಕಾರ್ತಿ *ಅಕ್ಕಮಹೇದೇವಿ* ಪ್ರಶಸ್ತಿಯು ಲಭಿಸಿದೆ. 11 ಏಪ್ರಿಲ್ 2017 ರ ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಶಸ್ತಿ ವಿತರಣೆಯಾಗುತ್ತದೆ.

ಮಲ್ಲಿಕಾ ಘಂಟಿ ಅವರು ಈಚೆಗೆ ಬರೆದ ಅಪ್ರಕಟಿತ ನಾಟಕ *`ಉರಿಯುಂಡ ಕರ್ಪೂರ’*ಹಸ್ತಪ್ರತಿಯನ್ನು ಓದಿದೆ. ಈ ನಾಟಕದಲ್ಲಿ ಚೌಡಯ್ಯನು ಮೋಳಿಗೆ ಮಾರಯ್ಯನಿಗೆ ಹೇಳುವ ಮಾತು `ಕೆಲವುಸತ್ಯಗಳನ್ನು ಹೇಳದಿದ್ದರೆ ಚರಿತ್ರೆಗೆ ಅಪಚಾರವಾಗುವುದು. ಈ ಕೂಗುಮಾರಿಯರು ಕೂಗಿದ್ದೆಲ್ಲ ಚರಿತ್ರೆಯ ಗುಡಾಣಕ್ಕೆ ಸೇರುತ್ತಿರುವಾಗ ನಿಮ್ಮಂಥಹ ಶರಣರು ಮಾತನಾಡ ಬೇಕು’ ಎನ್ನುವುದು ಇದೀಗ ನಡೆಯುತ್ತಿರುವ `ಸತ್ಯೋತ್ತರ ಚಿಂತನೆ’ ಎನ್ನುವುದರ ಸಾರರೂಪಿ ತಿಳಿವಾಗಿ ವರ್ತಮಾನಕ್ಕೆ ಲಗತ್ತಾಗುತ್ತದೆ.

ಕಲ್ಯಾಣದೊಳಗಿನ ಮಹಿಳಾ ಶರಣೆಯರು/ವಚನಕಾರ್ತಿಯರು ಕಲ್ಯಾಣವನ್ನು ಪರೀಕ್ಷೆ ಮಾಡುವ *ಉರಿಯುಂಡ ಕರ್ಪೂರ* ನಾಟಕ ಪ್ರಕಟಣೆಗೆ ಸಿದ್ದವಾದ ಈ ಸಂದರ್ಭದಲ್ಲೇ, ಅಕ್ಕಮಹಾದೇವಿ ಪ್ರಶಸ್ತಿ ಬಂದಿರುವುದು ಸಮಯೋಚಿತವೂ ಆಗಿದೆ.

LEAVE A REPLY

Please enter your comment!
Please enter your name here