ಅಕ್ರಮಗಣಿಗಾರಿಕೆ ಆರೋಪ

0
162

ಬಾಗಲಕೋಟೆ:ಅಕ್ರಮಗಣಿಗಾರಿಕೆ ಆರೋಪ ಹಿನ್ನೆಲೆ ೬ ಜನ ಅಧಿಕಾರಿಗಳ ತಂಡ ಪರಿಶೀಲನೆ ನಡಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಲಕುಂದಿ ಗ್ರಾಮದ ಬಳಿ ನಡೆದಿದೆ.
ಅಕ್ರಮಗಣಿಗಾರಿಕೆ ನಡೆಯುತ್ತಿರೋ ಕುರಿತು ಜಬ್ಬಾರ್ ಎಂಬುವವರಿಂದ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿತ್ತು.ದೂರು ಬಂದ ಹಿನ್ನೆಲೆಯಲ್ಲಿ ಎಸ್ಪಿ ಶಂಕರಗೌಡ್ ಸೋಮನಾಳ, ತಹಶೀಲ್ದಾರ್ ಮತ್ತು ಗಣಿ ಭೂ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ೬ ಜನರ ತಂಡ ನೇಮಿಸಲಾಗಿತ್ತು.ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ೧ ವಾರದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣನವರ ಸೂಚನೆ ನೀಡಿದ್ರು‌.ಡಿಸಿ ಆದೇಶದ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ .
ಒಟ್ಟು 667 ಎಕರೆ ಸಕಾ೯ರಿ ಜಮೀನು ಪ್ರದೇಶದಲ್ಲಿ 49 ಎಕರೆ ಪ್ರದೇಶಕ್ಕೆ ಗಣಿಗಾರಿಕೆಗೆ ಅವಕಾಶ ನೀಡಿತ್ತು, ಉಳಿದಂತೆ ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆ ಇಂದು ಅಕ್ರಮ ಗಣಿಗಾರಿಕೆ ನಡಿಸುತ್ತಿರೋ ಸ್ಥಳಕ್ಕೆ ಅಧಿಕಾರಿಗಳ ಪರಿಶೀಲನಾ ತಂಡ ಎ ಎಸ್ ಪಿ ಲಕ್ಷ್ಮೀಪ್ರಸಾದ ಅವರೊಂದಿಗೆ ತೆರಳಿ ಮಾಹಿತಿ ಕಲೆಹಾಕಿತು.

LEAVE A REPLY

Please enter your comment!
Please enter your name here