ಅಕ್ರಮವಾಗಿ ನೀಲಗಿರಿ ಮರಗಳನ್ನು ಕಡಿಯುತ್ತಿದ್ದವರು ಪರಾರಿ

0
176

ಬೆಂಗಳೂರು (ಹೊಸಕೋಟೆ): ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುವ ಕೆಲವರು ಅದೇ ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದು ಸುಮಾರು 5 ಲಕ್ಷ ಮೌಲ್ಯದ ಮರಗಳನ್ನು ಕಡಿದು ನೀರಿನಲ್ಲಿ ಹಾಕಿರುವುದು ಕಂಡು ಬಂದಿದ್ದು ಗ್ರಾಮಸ್ಥರು ಮುಖಂಡರು ನೀರಿನಿಂದ ಮರಗಳನ್ನು ಹೊರತೆಗೆದಿದ್ದಾರೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಚಿಕ್ಕತಗ್ಗಲಿ ಗ್ರಾಮದ ಕೆರೆಯಲ್ಲಿ ಸರ್ವೆ ನಂ 56 ರಲ್ಲಿ ಇರುವ ನೀಲಗಿರಿ ತೋಪು ಕಳೆದ ಸುಮಾರು ವರ್ಷಗಳಿಂದೆ 1927 ರಲ್ಲಿ ಮೊದಲನೇ ಜರ್ಮನಿ ಮಹಾಯುದ್ದದಲ್ಲಿ ಗೆಲವುಸಾದಿಸಿದಕ್ಕಾಗಿ ಇಸಾಕ್ ಬಿನ್ ಮೆಕ್ಕಲ್ ಎಂಬ ಸೈನಿಕನಿಗೆ ಸರ್ಕಾರ ಈ ಜಮೀನನ್ನು ಸೈನಿಕನಿಗೆ ನೀಡಿದ್ದು. ಆ ಜಮೀನನ್ನು ಚಿಕ್ಕತಗ್ಗಲಿ ಗ್ರಾಮದ ಬೈಯಾರೆಡ್ಡಿ ಹಣ ಕೊಟ್ಟು ತೆಗೆದುಕೊಂಡಿದ್ದರು ಆದರೆ ಈ ಜಮೀನು ಅರಣ್ಯಕ್ಕೆ ಸೇರಿದ್ದಾ ಅಥವ ಕಾಸಗಿ ಸ್ವತ್ತಾ ಎಂದು ನ್ಯಾಯಾಲಯದಲ್ಲಿ ಪ್ರಕರಣದಲ್ಲಿದ್ದು ಕೇಸು ನಡೆಯುತ್ತಿತ್ತು. ಆದರೆ ಇತ್ತೀಚೆಗಷ್ಟೇ ಅರಣ್ಯ ಇಲಾಖೆ ಸ್ವತ್ತು ಎಂದು ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿತ್ತು ಆದರೆ ಕೆಲವು ಪ್ರಭಾವಿ ರಾಜಕಾರಿಣಿಗಳು ಈ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದು ಗ್ರಾಮಸ್ಥರನ್ನು ಕಂಡು ಓಡಿಹೋಗಿದ್ದಾರೆ. ಇದು ಸರ್ಕಾರಿ ಸ್ವತ್ತು ಸರ್ಕಾರಕ್ಕೆ ಸೇರಬೇಕು ಎಂದು ವಕೀಲರಾದ ರಮೆಶ್ ಮತ್ತು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇನ್ನು ಈ ನೀಲಗಿರಿ ತೋಪಿನಲ್ಲಿದ್ದ ಕೂಲಿಯವರನ್ನು ಕೇಳಿದರೆ ನಮಗೇನು ಗೊತ್ತಿಲ್ಲ ಯಾರೋ ಬಂದು ಕಡಿದುಕೊಡಿ ಎಂದರು ಕೂಲಿಗಾಗಿ ಕಡಿಯುತ್ತಿದ್ದೇವೆ ಎಂದಿದ್ದಾರೆ ಈ ಪ್ರಕರಣಕ್ಕೆ ಸಂಬಂದಿಸಿದಂತೆ ತಪ್ಪಿ ತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪೋಲೀಸ್ ಠಾಣೆಯಲ್ಲಿ ಹಾಗು ತಹಸಿಲ್ದಾರ್ ರವರಿಗೆ ಗ್ರಾಮದ ಮುಕಂಡರು ಮನವಿ ಪತ್ರ ಸಲ್ಲಿಸಿದ್ದು ಈ ಕೂಡಲೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೆಚ್ಚರಿಕೆ ನೀಡಿದ್ದಾರೆ, ಈ ಸಂದರ್ಭದಲ್ಲಿ ಮುಖಂಡ ಕೋಡಿಹಳ್ಳಿ ಸುರೇಶ್, ಹೊಸಕೋಟೆ ಸುಬ್ಬರಾಜು, ತಾಲ್ಲೂಕು ಪಂಚಾಯ್ತಿ ಸದಸ್ಯ ವೆಂಕಟೆಶ್, ಕರಿಭೀರನಹೊಸಹಳ್ಳಿ ಮಂಜುನಾಥ್, ತವಟಹಳ್ಳಿ ರಾಮು. ಹಾಗು ಗ್ರಾಮಸ್ಥರಿದ್ದರು,

LEAVE A REPLY

Please enter your comment!
Please enter your name here