ಅಕ್ರಮ ಮದ್ಯ ವಶಕ್ಕೆ..

0
274

ಚಾಮರಾಜನಗರ/ಕೊಳ್ಳೇಗಾಲ,ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಒಟ್ಟು 53 ಸಾವಿರ ರೂ. ಮೌಲ್ಯದ ಮದ್ಯ ಹಾಗು ವಿವಿಧ ಸಾಮಗ್ರಿಗಳನ್ನು ಇಂದು ಅಬಕಾರಿ ಇಲಾಖೆ ನಾಶ ಪಡಿಸಿತು‌.ಅಬಕಾರಿ ಇಲಾಖೆ ಉಪ ಆಯುಕ್ತ ಎ.ಎಲ್.ನಾಗೇಶ್ ಅವರ ಆದೇಶದ ಮೇರೆಗೆ ಉಪಾಧೀಕ್ಷಕ ಗಂಗಾಧರ್ ಮುದಣ್ಣವರ್ ಸಮ್ಮುಖದಲ್ಲಿ ಮದ್ಯ ನಾಶ ಪಡಿಸಲಾಯಿತು‌.

ಅಕ್ರಮವಾಗಿ ಸಾಗಾಣೆ ಮತ್ತು ಮಾರಟ ವೇಳೆಯಲ್ಲಿ ಜಪ್ತಿ ಮಾಡಿದ ಮದ್ಯ ಮತ್ತು ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಒಟ್ಟು 225 ಲೀ. ಮದ್ಯವನ್ನು ನಾಶ ಪಡಿಸಿದ್ದು ಇದರ ಮೌಲ್ಯ ಸುಮಾರು 53 ಸಾವಿರ ಎಂದು ಉಪಾಧೀಕ್ಷಕ ಗಂಗಾಧರ್ ಮುದಣ್ಣವರ್ ತಿಳಿಸಿದರು‌.ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕಿ ಮೀನಾ, ಕೆ.ಎಸ್.ಬಿ.ಸಿ.ಎಲ್ ನಿಂಗಪ್ಪ, ಉಪ ನಿರೀಕ್ಷಕರಾದ ತನ್ವೀರ್ ಮತ್ತು ರೇವಣ್ಣ, ಆರ್.ಐ ನಿರಂಜನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here