ಅಕ್ರಮ ಮದ್ಯ ಸರಬರಾಜುದಾರನ ಬಂಧನ

0
622

ತುಮಕೂರು/ ಪಾವಗಡ : ಅಕ್ರಮವಾಗಿ ಹಳ್ಳಿಗಳಿಗೆ ಮದ್ಯಪೂರೈಕೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಕರಿಯಮ್ಮನಪಾಳ್ಯ ಗ್ರಾಮದದಲ್ಲಿ ನಡೆದಿದೆ

ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದದಲ್ಲಿರುವಾ ಅಂಗಡಿಗಳಿಗೆ ಅಕ್ರಮವಾಗಿ ಮದ್ಯಪಾನ ಪೂರೈಕೆ ಮಾಡುತ್ತಿದ್ದು ಮನೆಬಾಗಿಲಿಗೆ ಮದ್ಯಸಿಗುತ್ತಿರುವುದರಿಂದ ಬೆಳಗಿನ ಕಾಪಿ ಸಮಯಕ್ಕೆ ಮದ್ಯಸೇವಿಸಿ ಮನೆಗಳಲ್ಲಿ ಕುಡುಕರ ಹಿಂಸೆ ತಾಳಲಾರದೆ ಇಂದು ಪಾವಗಡ ತಾಲ್ಲೂಕಿನ ಕರಿಯಮ್ಮನಪಾಳ್ಯ ಗ್ರಾಮದಲ್ಲಿ ಅಂಗಡಿಗಳಿಗೆ ಮದ್ಯ ಪೂರೈಕೆ ಮಾಡುತ್ತಿದ್ದ ವ್ಯಕ್ತಿ ರಾಮಚಂದ್ರಪ್ಪ ಮತ್ತು ದ್ವಿಚಕ್ರ ವಾಹನವನ್ನು ಗ್ರಾಮಸ್ಥರು ಹಿಡಿದು ಅರಸೀಕೆರೆ ಪೋಲಿಸ್ ಠಾಣೆಗೆ ಒಪ್ಪಿಸಿದರು

ಗ್ರಾಮದ ಮುಖಂಡ ಓಂಕಾರ್ ನಾಯಕ ಮಾತನಾಡಿ ಮಂಗಳವಾಡ ಗ್ರಾಮದ ಮಲ್ಲಿಕಾರ್ಜುನಯ್ಯ ಮಾಲಿಕತ್ವದ ಮದ್ಯದಂಗಡಿಯಿಂದ ಸುತ್ತಮುತ್ತಲಿನ ಗ್ರಾಮಗಳಾದ ಕರಿಯಮ್ಮನಪಾಳ್ಯ ಮುಗದಾಳಬೆಟ್ಟ ಕೋಟಗುಡ್ಡ ಗ್ರಾಮಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದ್ವಿಚಕ್ರ ವಾಹನದಲ್ಲಿ ಮದ್ಯಪೂರೈಕೆ ಮಾಡುತ್ತಿದ್ದು ಹಳ್ಳಿಗಳಲ್ಲಿ ಮದ್ಯ ಸಿಗುವುದರಿಂದ ವಯೋವೃದ್ದರಲ್ಲದೆ ವಿದ್ಯಾರ್ಥಿಗಳು ಕೂಡ ಮದ್ಯಪಾನ ಮಾಡುತ್ತಿರುವುದರಿಂದ ಯುವಜನತೆಯು ಹಾಳಾಗುವುದಲ್ಲದೆ ಅವರ ಜೀವನವೇ ಮದ್ಯವೆಸನಿಗಳಾಗಿ ಬದುಕಬೇಕಾದ ಪರಿಸ್ಥಿತಿ ಎದುರಾಗಿದ್ದು ನಾವು ಅಬಕಾರಿ ಇಲಾಖೆ ಹಾಗೂ ಪೋಲಿಸ್ ಠಾಣೆಗೆ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯ ಏರಿದರು ಪ್ರಯೋಜನವಿಲ್ಲದಂತಾಗಿದೆ ಎಂದು ಅವೇದನೆ ವ್ಯಕ್ತಪಡಿಸಿದರು

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಪೋಲಿಸರು ಅಂಗಡಿಗಳಿಗೆ ಸಾಗಿಸುತ್ತಿದ್ದ ಮದ್ಯ ಮತ್ತು ದ್ವಿಚಕ್ರ ವಾಹನ ರಾಮಚಂದ್ರಪ್ಪ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೋಂಡಿರುತ್ತಾರೆ

ಈ ಸಂದರ್ಭದಲ್ಲಿ ಗ್ರಾಮಸ್ಥರು ರಾಜೇಂದ್ರ ಅಂಜಿ ನಾಗರಾಜು ಕುಮಾರ್ ಪಾಲಾಕ್ಷ ತಿಮ್ಮರಾಜು ಗೋವಿಂದರಾಜು ಸೇರಿ ಅನೇಕರಿದ್ದರು

LEAVE A REPLY

Please enter your comment!
Please enter your name here