ಅಕ್ರಮ ಮರಳುದಂದೆಯ ಬಿಗ್ ಎಕ್ಸ್ಲೂಸಿವ್

0
124

ಕರ್ನಾಟಕದ ಪೊಲೀಸ್ ವ್ಯವಸ್ಥೆ ಹೇಗಿದೆ ನೋಡಿ

ತುಮಕೂರು/ಮದುಗಿರಿ: ನೀವು ಅಕ್ರಮ ಮಾಡಬೇಕಾ ಆಗದರೆ ಪೊಲೀಸರ ಹತ್ತಿರ ನಂಬಿಕೆ ಗಳಿಸಿ ಅವರನ್ನ ಚೆನ್ನಾಗಿ ನೋಡಿಕೊಳ್ಳಿ
ಪೊಲೀಸರು ಸಪೋರ್ಟ್ ಮಾಡಿದರೆ ಸಾಕಂತೆ ಏನು ಬೇಕಾದರು ಮಾಡಬಹುತಂತೆ.ಈ ಸ್ಟೋರಿ ನೀವೆ ನೋಡಿ ಗೊತ್ತಾಗುತ್ತೆ ನಿಮ್ಮ ಪೊಲೀಸ್ ಬಗ್ಗೆ ನಾವು ಸಪೋರ್ಟ್ ಮಾಡಿದ್ದರೆ ಸಾಕು ಬೇರೆಯವರು ಏನು ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ.

ನಮ್ಮ ಸಬ್ ಇನ್ಸ್‌ಪೆಕ್ಟರೇ ಹೇಳಿದ್ದಾರೆ ಸೈನ್ ಹಾಕಿ ಕೊಡು ಅಂಥ ನಾಳೆ ಬಾ. ನಾನು ಕ್ರಾಟರ್ಸ್ ಹತ್ತಿರ ಬರ್ತೀನಿ ನೀವು ಇರ್ತೀರಾ ಅಲ್ವಾ ಪ್ರೆಸ್ ಅವರಿಗೆ ಈ ವಿಷಯ ಗೊತ್ತಾಗಿದೆ , ಆದರೆ ವಿಡಿಯೋ ಸಿಕ್ಕಿಲ್ಲ ಮತ್ತೆ ಬಿಡು ಯಾಕೆ ತಲೆ ಕೆಡಿಸಿಕೊಳ್ಳುತ್ತೀಯ.

ಅಣ್ಣಾ ನೀವು ೧೦೦೦ ಕೇಳಿದಾಗ ೫೦೦ ರೂ ಆದ್ರೂ ಕೊಟ್ಟು ನಿಮ್ಮ ನಂಬಿಕೆ ಉಳಿಸಿಕೊಂಡಿದ್ದೇನೆ ಅಲ್ವಾ
ಇದೇನಪ್ಪ ಲವರ್ಸ್ ಮಾತಾನಾಡಿರುವುದು ಅಂದು ಕೊಂಡ್ರಾ.ನಿಜಕ್ಕೂ ಇಲ್ಲ ಈ ಸಂಭಾಷಣೆ ಪೊಲೀಸ್ ಮತ್ತು ಲೂಟಿಕೋರರದ್ದು ಹೌದು ಮಧುಗಿರಿ ತಾಲೂಕು ಕೊಡಿಗೇನ ಹಳ್ಳಿ ಪೊಲೀಸರ ಕರ್ಮಕಾಂಡವಿದು.

ಪೊಲೀಸ್ ಪೇದೆ ಗೋವಿಂದರಾಜು ಮತ್ತು ಧಂಧೆಕೋರನು ಮಾತಾನಾಡಿಕೊಳ್ಳುವ ಆಡಿಯೋ ಲಭ್ಯವಾಗಿದೆ.ಇಲ್ಲಿ ಮರಳನ್ನು ಲೂಟಿ ಮಾಡುವುದಕ್ಕೆ ಪೋಲಿಸರೇ ಸಾಥ್ ಕೊಡುತ್ತಿದ್ದಾರೆ. ಅಕ್ರಮವಾಗಿ ಲೂಟಿ ಮಾಡುವುದಕ್ಕೆ ಇಲ್ಲಿನ ಸಬ್ ಇನ್ಸ್‌ಪೆಕ್ಟರ್ ಮೋಹನ್ ಸೈನ್ ಹಾಕುತಿದ್ದಾರಂತೆ.

ಮಧುಗಿರಿಯಲ್ಲಿ ಜಯಮಂಗಲ ನದಿ ಹರಿಯುವ ದಾರಿ ಇಲ್ಲಿ ಲಕ್ಷಗಟ್ಟಲೆ ಮರಳು ಲೋಡ್ ಗಳನ್ನು ಲೂಟಿ ಮಾಡಿ ಬಿಟ್ಟಿದ್ದಾರೆ. ಇಡೀ ತಾಲೂಕಿನಲ್ಲಿ ಮರಳು ದಂದೆಗೆ ಕಡಿವಾಣ ಹಾಕುಲು ಇನ್ನಿಲ್ಲದೆ ಜನರು ಹರಸಾಹಸ ಪಟ್ಟರೂ ಅಧಿಕಾರಗಳು ಮಾತ್ರ ಲೂಟಿ ಮಾಡುತ್ತಲೇ ಇದ್ದಾರೆ.

ಹೌದು ಈಗಾಗಲೇ ಕೋಟಿ ಕೋಟಿ ಮೌಲ್ಯದ ಮರಳು ಲೂಟಿ ಹೊಡೆದು ಜಯಮಂಗಲಿ ನದಿಯನ್ನು ಬರಡು ಮಾಡಿರುವ ಲೂಟಿಕೋರರಿಗೆ ಇನ್ನೂ ದಾಹ ತೀರಿಲ್ಲ.
ಜಯಮಂಗಲಿ ನದಿ ಈ ಲೂಟಿ ಕೋರರಿಂದ ಬರಡಾಗಿ ಅದೆಷ್ಟೋ ವರ್ಷಗಳೇ ಕಳೆದಿವೆ.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ ಎಂದು ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here