ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಪ್ರತಿಭಟನೆ

0
140

ವಿವಿಧ ಬೇಡಿಕೆಗಳ  ಒತ್ತಾಯಿಸಿ ಅಖಿಲಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ  ಪ್ರತಿಭಟನೆ

ಬಳ್ಳಾರಿ /ಹೊಸಪೇಟೆ: ವೇತನ ಆಯೋಗದ  ಅವಽ ವಿಸ್ತರಣೆಯಾಗಿರುವಹಿನ್ನೆಲೆಯಲ್ಲಿ ಶೆಕಡ  ೩೦ ರಷ್ಟು ಮಧ್ಯಂತರ ಪರಿಹಾರವನ್ನುತಕ್ಷಣವೇ ಶಿಫಾರಸ್ಸು ಮಾಡಬೇಕು ಹಾಗೂ ಆರನೇ ವೇತನಆಯೋಗದಲ್ಲಿ ನೌಕರರ ವೇತನವನ್ನು ೧:೯ ರಅನುಪಾತದಲ್ಲಿ ಕನಿಷ್ಟ ರೂ೨೧೦೦೦ ಕ್ಕೆ ಹಾಗೂ ಗರಿಷ್ಟರೂ. ೨ ಲಕ್ಷದ ವರೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಮಾಡಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿನೌಕರರ ಒಕ್ಕೂಟದ ತಾಲೂಕು ಸಮಿತಿಯ ಪದಾಧಿಕಾರಿಗಳುಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರಹೆಚ್.ವಿಶ್ವನಾಥ ಅವರ ಮೂಲಕ ವೇತನ ಆಯೋಗದಅಧ್ಯಕ್ಷ ಎಂ. ಆರ್. ಶ್ರೀನಿವಾಸಮೂರ್ತಿ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.

ರಾಜ್ಯ ಸರ್ಕಾರವು ೬ನೇ ರಾಜ್ಯ ವೇತನ ಆಯೋಗವನ್ನುರಚಿಸಿ, ನೌಕರರಿಗೆ ದೊರೆಯಬೇಕಾದ ವೇತನ ಸೌಲಭ್ಯಗಳಕುರಿತು ೪ ತಿಂಗಳ ಒಳಗೆ ವರದಿ ನೀಡುವಂತೆ ಆದೇಶಿಸಿದೆ.ಶೇ.೩೦ರಷ್ಟು ಮಧ್ಯಂತರ  ಪರಿಹಾರವನ್ನು ನೀಡಬೇಕುಎಂದು  ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿ ಧರಣಿ ಮತ್ತುಉಪವಾಸ ಸತ್ಯಾಗ್ರಹ ಹೋರಾಟವನ್ನು ನಡೆಸಿತ್ತು. ಈಮಧ್ಯೆ ೬ನೇ ವೇತನ ಆಯೋಗದ ಅಧ್ಯಕ್ಷರು ತಮ್ಮಆಯೋಗವು ನಿಗದಿತ ೪ ತಿಂಗಳ ಒಳಗೆ ವರದಿನೀಡುವುದಿದ್ದು, ಮಧ್ಯಂತರ ಪರಿಹಾರವನ್ನು ಶಿಫಾರಸ್ಸು ಮಾಡುವುದಿಲ್ಲ  ಎಂದು ಹೇಳಿಕೆ ನೀಡಿದ್ದರು.

ಇದೀಗ ೬ನೇ ವೇತನ ಆಯೋಗವು ವಿವಿಧ ಕಾರಣಗಳಹಿನ್ನೆಲೆಯಲ್ಲಿ, ಕಾಲಾವಧಿ ವಿಸ್ತರಿಸುವಂತೆ  ಸರ್ಕಾರವನ್ನುಕೋರಿದ್ದು, ಅದರಂತೆ, ರಾಜ್ಯಸರ್ಕಾರವು ಸದರಿ ಆಯೋಗದಕಾಲಾವಧಿಯನ್ನು ಇನ್ನೂ ೪ ತಿಂಗಳ ಅಂದರೆ ೨೦೧೮ರಜನವರಿ ಅಂತ್ಯದವರೆಗೆ ವಿಸ್ತರಿಸಿದೆ.ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಸಿದಲ್ಲಿ ಕರ್ನಾಟಕರಾಜ್ಯ ಸರ್ಕಾರಿ ನೌಕರರು ಶೇಕಡ ೬೭ ರಷ್ಟು ಕಡಿಮೆವೇತನ ಪಡೆಯುತ್ತಿದ್ದಾರೆ. ಒಟ್ಟಾರೆ ಆಯವ್ಯಯದಲ್ಲಿನೌಕರರ ವೇತನಕ್ಕಾಗಿ ನೆರೆಹೊರೆಯ ರಾಜ್ಯಗಳಾದಆಂದ್ರಪ್ರದೇಶ ಶೇಕಡ ೩೨ ರಷ್ಟು ಕೇರಳ ಶೇಕಡ ೩೩.೨೧ರಷ್ಟು ತಮಿಳುನಾಡು ಶೇಕಡ ೩೦.೭೭ ರಷ್ಟುವ್ಯಯಿಸುತ್ತಿದ್ದು, ಕರ್ನಾಟಕ ರಾಜ್ಯ ಮಾತ್ರ, ತನ್ನಆಯವ್ಯಯದಲ್ಲಿ ಶೇಕಡ ೧೮.೨೯ರಷ್ಟನ್ನು ಮಾತ್ರವೇ ಖರ್ಚುಮಾಡುತ್ತಿದೆ. ಇದು ದೇಶದಲ್ಲಿ ದುಡಿಯುವ ನೌಕರರ ನಡುವೆಅಸಮಾನತೆ ಸೃಷ್ಟಿ ಮಾಡಿದೆ.ಆದ್ದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗುವಂತೆ೬ನೇ ರಾಜ್ಯ ವೇತನ ಆಯೋಗದಲ್ಲಿ ನೌಕರರ ವೇತನವನ್ನು೧:೯ ರ ಅನುಪಾತದಲ್ಲಿ ನಿಗದಿಪಡಿಸಿ ಕನಿಷ್ಟ ರು೨೧೦೦೦ಕ್ಕೆ ಹಾಗೂ ಗರಿಷ್ಟ ೨೦೦೦೦೦ ಕ್ಕೆ ಶಿಫಾರಸ್ಸುಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿನೌಕರರ ಒಕ್ಕೂಟದ ಹೊಸಪೇಟೆ ತಾಲೂಕು ಘಟಕದಗೌರವಾದ್ಯಕ್ಷ ಕಂಪ್ಲಿ ಚಂದ್ರಪ್ಪ,ಅಧ್ಯಕ್ಷನಾಗರಾಜ ಪತ್ತಾರ್,  ಕಾರ್ಯ ದರ್ಶಿ ಉಮೇಶ್ ಜಹಗಿರ‍್ದಾರ್, ಮುಖಂಡರಾದ  ತಾಯಪ್ಪ ನಾಯಕ,ಬಿ.ಮಹೇಶ ಯಿಸ್ಮಾಯಿಲ್,ಪದ್ಮನಾಭಕರಣಂ,ಸೌಭಾಗ್ಯಲಕ್ಷ್ಮಿ,ಎಂ.ಉಮೇಶ್, ಎಂ. ಧರ್ಮನಗೌಡ್, ಕಳಕನಗೌಡ್ಪಾಟೀಲ್, ಕುಮಾರಸ್ವಾಮಿ, ಕೆ. ಹನುಮಂತಪ್ಪ,ಶಿವರಾಮ್‌ನಾಯಕ್, ಶಮೀಮ್‌ಭಾನು, ರಾಜಶೇಖರ್,ಮಲ್ಲಿಕಾರ್ಜುನ, ಶ್ರೀಹರಿ, ಮಂಜುಳಾರಾಣಿ,ಅಬ್ದುಲ್‌ಸಮದ್, ನಾಗೇಶ್ ಚೌದರಿ, ಅಂಬುಜ ಸೇರಿದಂತೆಇತರರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here