ಅಗಲಿದ ಗುರುಗಳಿಗೆ ಪ್ರಶಸ್ತಿ ಸಮರ್ಪಿಸಿದ ವಿದ್ಯಾರ್ಥಿನಿಯರು

0
102

ತುಮಕೂರು:ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ HPS ಶಾಲಾ ತಾಲೂಕಿನ ಮಟ್ಟದ ಕ್ರೀಡಾಕೂಟದಲ್ಲಿ ಹೆಣ್ಣು ಮಕ್ಕಳ ಖೋಖೋ,(ಪ್ರಥಮ) ಷಟಲ್(ಪ್ರಥಮ) ಕಬಡ್ಡಿ,ಹಾಗೂ ಆಥ್ಲೇಟಿಕ್ಸ ಗಳಲ್ಲೂ ಪ್ರಶಸ್ತಿಗಳನ್ನು ತಮ್ಮಂದಾಗಿಸಿಕೊಂಡ ಬೆಳ್ಳಾರದ ವಿದ್ಯಾರ್ಥಿನಿಯರು ತಮ್ಮ ಪ್ರಶಸ್ತಿಗೆ ಈಚೆಗಷ್ಟೇ ಅಕಾಲಿಕ ಮರಣಕ್ಕೀಡಾದ ದಿವಂಗತ ತ್ಯಾಗರಾಜ್ ಅವರ ತರಬೇತಿ ಹಾಗೂ ಸ್ಫೂರ್ತಿಯೇ ಕಾರಣ ಎಂದು ಬಗೆದು ಹುಳಿಯಾರಿನ ಎಪಿಎಂಸಿ ಮುಂಭಾಗದಲ್ಲಿರುವ ಅವರ ಸಮಾಧಿ ಬಳಿಗೆ ನಡೆದು ತಾವು ಗೆದ್ದ ಪದಕಗಳನ್ನು ಸಮಾಧಿಯ ಮೇಲೆ ಇಟ್ಟು ಅಗಲಿದ ಗುರುಗಳಿಗೆ ಭಾಷ್ಪಂಜಲಿ ಸಲ್ಲಿಸಿ ಪೂಜಿಸಿದರು.

ನಂತರ ಅವರ ಮನೆಗೆ ತೆರಳಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಇಂತಹ ಅಪರೂಪದ ಘಟನೆಗೆ ಸಾಕ್ಷಿಭೂತರಾದ ಅವರ ಕುಟುಂಬದವರು ಕಣ್ಣಾಲ್ಲಿ ತುಂಬಿಕೊಂಡು ಈ ವಿದ್ಯಾರ್ಥಿನಿಯರು ಮುಂದೆ ಜಿಲ್ಲಾಮಟ್ಟದಲ್ಲೂ ಗೆದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಯಲ್ಲೂ ವಿಜೇತರಾಗಿ ಶಾಲೆಗೆ ತನ್ಮೂಲಕ ಊರಿಗೆ ಹೆಸರು ತರಲಿ ಎಂದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here