ಅಗ್ನಿಶಾಮಕ ವಿಲಂಬಕ್ಕೆ ಗಿಡಮರಗಳ ದಹನ

0
198

ಮಂಡ್ಯ/ಮಳವಳ್ಳಿ: ಅಗ್ಮಿಶಾಮಕ ದಳ ಸಮಯಕ್ಕೆ ಬಾರದ ಕಾರಣ  ಅಕಸ್ಮಿಕ ಬೆಂಕಿಯಿಂದ  ತೆಂಗಿನಮರಗಳು ಹಾಗೂ ನೀಲಗಿರಿಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಮಳವಳ್ಳಿ ನಗರದ ಎನ್ ಇ ಎಸ್ ಬಡಾವಣೆಯಲ್ಲಿ ನಡೆದಿದೆ. ನಗರದ ನಾಗಣ್ಣ ಎಂಬುವರ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಕಂಡು ಯುವಕನೊಬ್ಬ  ತಕ್ಷಣ ದೂರವಾಣಿ ಮೂಲಕ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ವಾಹನ  ಇಲ್ಲ ಎಂದು ಸಬೂಬು ಹೇಳಿ ನುಳಿಚಿಕೊಂಡರು ಎಂಬ ಆರೋಪ ಅಗ್ನಿಶಾಮಕದಳದವರ ಮೇಲಿದೆ. ಕೊನೆಗೆ ಮದ್ದೂರು ನಲ್ಲಿರುವ ಅಗ್ನಿ ಶಾಮಕಕ್ಕೆ ಪೋನ್ ಮಾಡಿ ಕರೆಸಿಕೊಂಡರು, ಅದು ಬರಲು ಸುಮಾರು ಅರ್ಧಗಂಟೆ ಬೇಕಾಯಿತಂತೆ ಅಷ್ಟರಲ್ಲಿ ಬೆಂಕಿ ಹರಡಿ ತೆಂಗಿನಮರ ಹಾಗೂ ಪಕ್ಕದ ಜಮೀನಿನ ನೀಲಗಿರಿಗಿಡಗಳು ಬಹುತೇಕ ಸುಟ್ಟು ಕರಕಲಾಗಿವೆ. ಬೆಂಕಿತಗುಲಿದನ್ನು ಕಂಡ ಸ್ಥಳೀಯರೂ  ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಅಷ್ಟೇನೂ ಪ್ರಯೋಜನ ವಾಗಿಲ್ಲ ಎಂದು ತಿಳಿದು ಬಂದಿದೆ  ಒಟ್ಟಿನಲ್ಲಿ ಅಗ್ನಿಶಾಮಕ ಸ್ಥಳಕ್ಕೆ ಆಗಮಿಸಲು ವಿಳಂಬದಿಂದ ಇಷ್ಟೆಲ್ಲಾ ನಷ್ಟವಾಗಿದೆ ದೇವರ ದಯೆಯಿಂದ ಯಾವುದೇ ರೀತಿಯ ಪ್ರಾಣಾಪಾಯ ಆಗದೇ ಇರುವುದು ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಸಮಯಕ್ಕೆ ಬಾರದೆ ನೆಪಹೇಳಿ ಕರ್ತವ್ಯಮರೆತ ಅಗ್ನಿಶಾಮಕ ದಳದವರ ಬಗ್ಗೆ  ಸ್ಥಳೀಯರ ಅಸಮಾಧಾನ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here