ಅಡಿಗಲ್ಲು ಸಮಾರಂಭ..

0
201

ಕೊಪ್ಪಳ : ಬಡ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರು ನಮ್ಮ ಜಿಲ್ಲೆಗೆ ವಿಶೇಷ ಅನುದಾನ ನೀಡಿದ್ದು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಸಮೀಪದ ಗಿಣಿಗೇರಾ ಗ್ರಾಮದಲ್ಲಿ ರೂ. 2 .ಕೋಟಿ ವೆಚ್ಚದ ಬಾಲಕರ ವಸತಿ ನಿಲಯ ಕಟ್ಟಡದ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿ ಸುತ್ತಾ ಮುತ್ತಾ ಸಾಕಷ್ಟು ಹಳ್ಳಿಗಳು ಬರುತ್ತವೆ ಇಲ್ಲಿಯ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಈ ವಸತಿ ನಿಲಯ ಸ್ಥಾಪಿಸಲು ನಿದ೯ರಿಸಲಾಗಿದೆ ಎಂದರು.

ಈ ಸಂದಭ೯ದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷ ಬಾಲಚಂದ್ರ.ಜಿ.ಪಂ.ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ.ಗೂಳಪ್ಪ ಹಲಗೇರಿ.ತಾಲೂಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ.ಇನ್ನಿತರರು ಹಾಜರಿದ್ದರೂ.

LEAVE A REPLY

Please enter your comment!
Please enter your name here