ಅಡ್ಡದಾರಿ ಹಿಡಿದಿದ್ದವನು…ಅನಾಥರಕ್ಷಕನಾದ!

0
298

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಗರದ ಲಯನ್ಸ್ ಭವನದಲ್ಲಿ “ಬರವಸೆಯ ಮನೆ”ಯ ಆಟೋ ರಾಜ ರವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ನಗರದಲ್ಲಿ ವರ್ಷಗಳಿಂದ ನೀರು ನೆರಳಿಲ್ಲದೇ ಬೀದಿಬೀದಿ ಅಲೆಯುತ್ತಿದ್ದ ಒಂಬತ್ತು ಜನ ಬುದ್ಧಿ ಮಾಂದ್ಯರನ್ನು ತನ್ನ ಬರವಸೆಯ ಮನೆಗೆ ಕರೆದೊಯ್ದರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಈಗಾಗಲೇ ಪ್ರತೀ ತಿಂಗಳು ದಾನಿಗಳಿಂದ ದವಸ ದಾನ್ಯಗಳನ್ನು ಶೇಖರಿಸಿ ಬರವಸೆಯ ಮನೆಗೆ ತಲುಪಿಸುವ ಉತ್ತಮ ಕಾರ್ಯಕ್ಕೆ ಕೈಹಾಕಿರುವ ನಗರಠಾಣೆಯ ಪೊಲೀಸ್ ಪೇದೆ ಮೂರ್ತಿ ಯವರ ಕಾರ್ಯವನ್ನು ಹಲವು ಗಣ್ಯರು, ಸ್ಥಳೀಯ ಸಂಘಟನೆಗಳು ಶ್ಲಾಘಿಿಸಿ, ನಾವೂ ನಿಮ್ಮ ಜೊತೆಗಿದ್ದೇವೆ ಎಂಬ ಬರವಸೆ ನೀಡಿದ್ದಾರೆ.

ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿನ “ಹೋಮ್ ಆಫ್ ಹೋಪ್” ಎಂಬ ಬುದ್ದಿಮಾಂದ್ಯರಿಗಾಗಿ ನಡೆಸುತ್ತಿರುವ ಆಸರೆಯ ಆಶ್ರಮಕ್ಕೆ ಅನಾಥರಿಗೆ ಅಪ್ಪ-ಅಮ್ಮ ನಂತೆ ಬಾದ್ಯತೆವಹಿಸಿ ಹಗಲಿರುಳು ಶ್ರಮಿಸುತ್ತಿರುವ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಎಂದು ಹೇಳಿಕೊಳ್ಳುವ ವ್ಯಕ್ತಿ (ಶಕ್ತಿ)ಯ ಹಿಂದೆ ಒಂದು ರೋಚಕ ಕಥೆಯಿದೆ ಎಂದರೇ ಯಾರೂ ಊಹಿಸಲಸಾಧ್ಯ.

ಸುಮಾರು 20 ವರ್ಷಗಳ ಹಿಂದೆ ಸಹವಾಸ ದೋಷ ದಿಂದ ಕುಡಿತ ಗಲಾಟೆ,ಕೇಸು ಗೀಸು ಅಂತ ಅಡ್ದ ದಾರಿ ಹಿಡಿದ ಒಬ್ಬ ಹುಡುಗ ಆಟೋ ಚಾಲನಾಗಿ ದುಡಿದಿದ್ದೆಲ್ಲಾ ದುಂದುವೆಚ್ಚಮಾಡುತ್ತಾ,ಹೆತ್ತವರಿಗೆ ಬೇಡವಾಗಿ, ಹತ್ತವರಿಂದ ದಿನ ನಿತ್ಯ ಶಾಪಕ್ಕೀಡಾಗಿ, ಮನೆಗೇ ಬೇಡವಾದ ಮಗನಾಗಿದ್ದ ವ್ಯಕ್ತಿಯೇ ಟಿ.ರಾಜ.

ಅಂದಿನ ಆ ಹುಡುಗನೇ ನೂರಾರು ಜನ ಬುದ್ಧಿಮಾಂದ್ಯ ಅನಾಥರಿಗೆ ನೆರವಾಗಿ,ನೆರಳಾಗಿ ಅವರನ್ನೆಲ್ಲಾ ತನ್ನ ಸ್ವಂತದವರಂತೆ ಪೋಷಿಸುತ್ತಿರುವ ಈಗಿನ ಅನಾಥ ರಕ್ಷಕ ಆಟೋ ರಾಜ ಎಂದರೇ ನೀವು ನಂಬಲೇ ಬೇಕು.

ಮಕ್ಕಳಿಗೇ ಬೇಡವಾಗಿ ಬೀದಿಗೆ ಬಿದ್ದ ಅದೆಷ್ಟೋ ತಂದೆ-ತಾಯಿಗಳಿಗೆ ಮಗನಾಗಿ,ಅನಾಥರಿಗೆ ರಕ್ಷಕನಾಗಿ ಹಗಲಿರುಳು ದುಡಿಯುವ ಈತ ಒಬ್ಬ ಅನಕ್ಷರಸ್ಥ ಆದರೂ ಈಗಾಗಲೇ ತನ್ನ ನಿಸ್ವಾರ್ಥ ಸೇವೆಯಿಂದ ಎರಡು ಡಾಕ್ಟರೇಟ್ ಪಡೆದಿರುವುದನ್ನೂ ಇಲ್ಲಿ ನೆನೆಸಬೇಕಾಗುತ್ತೆ. ಅದರ ಬಗ್ಗೆ ಸರಳವಾಗಿ ಮಾತನಾಡುವ ಅವರು ನಾನು ಎಂದೂ ಯಾರ ಹೊಗಳಿಗೆಗಾಗಿ ಈ ಕಾರ್ಯಮಾಡುತ್ತಿಲ್ಲ ಕೇವಲ ನಾನು ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಂತೆ ಆಪತ್ಕಾಲದಲ್ಲಿರುವವರಿಗೆ ಅನಾಥರಿಗೆ ಅನ್ನ ನೀಡುತ್ತಿದ್ದೇನೆ, ಅದೂ ನಿಮ್ಮಂತಹ ದಾನಿಗಳು ನೀಡಿದ್ದನ್ನು ನಾನು ಅವರಿಗೆ ಬಡಿಸುತ್ತಿದ್ದೇನೆ ಆಸರೆ ಕಲ್ಪಿಸುತ್ತಿದ್ದೇನೆ ಅಷ್ಟೇ ಎನ್ನುವ ಅವರ ದೊಡ್ಡಗುಣದ ಮುಂದೆ ನಾವೆಲ್ಲಾ ಸಣ್ಣವರಂತೆ ಭಾಸವಾಗುತ್ತೆ ಅಲ್ಲವೆ.

LEAVE A REPLY

Please enter your comment!
Please enter your name here