ಅಡ್ಡದಾರಿ ಹಿಡಿಯುತ್ತಿರುವ ಪೊಲೀಸರಿಗೆ ಬುದ್ದಿ ಕಲಿಸೋರು ಯಾರು?

0
736

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಅಕ್ರಮ ಮರಳು ಸಾಗಾಟಗಾರರಿಂದ ಹಣ ವಸೂಲಿಗಿಳಿದ ಪೊಲೀಸರು. ಮಾರ್ಗ ಮದ್ಯದಲ್ಲೇ ಮರಳು ಟ್ರಾಕ್ಟರ್ ಗಳನ್ನು ಅಡ್ಡಗಟ್ಟಿ ಸಾವಿರಾರು ರೂಗಳಿಗೆ ಒತ್ತಾಯ ಮಾಡುವ ಪೊಲೀಸರಿಗೆ ಹಣ ನೀಡದಿದ್ದರೇ ಮಾತ್ರವೇ ಠಾಣೆಗೆ ಕರೆದೊಯ್ದು ಕೇಸು ದಾಖಲಿಸಿ ವಾಹನ ಸೀಜ್ ಮಾಡುವ ಅಡ್ಡದಾರಿ ಹಿಡಿದಿರುವ ಪೊಲೀಸರಿಗೆ ಬುದ್ದಿ ಕಲಿಸಬೇಕಿರುವ ಮೇಲಧಿಕಾರಿಗಳು ವಿಚಾರ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಹಿನ್ನಲೆಯಲ್ಲಿ ಇದರಲ್ಲಿ ಅವರೂ ಶಾಮೀಲಾಗಿರುವ ಆರೋಪ ಕೇಳಿ ಬರುತ್ತಿದೆ.

ಗ್ರಾಮಾಂತರ ಠಾಣೆ ಪೊಲೀಸ್ ಪೇದೆ ಶಿವಾನಂದ ಪಾಲನ ಜೋಗಿಹಳ್ಳಿ ಸಮೀಪ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಒಂದನ್ನು(KA 37-4049) ತಡೆದು ಹೆಚ್ಚಿನ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟಿದ್ದು, ಕೊಟ್ಟರೇ ಇಲ್ಲೇ ಬಿಡ್ತೇನೆ ಇಲ್ಲದೇ ಇದ್ದರೇ ಕೇಸ್ ಹಾಕಿ ಗಾಡಿ ಸೀಜ್ ಮಾಡಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಟ್ರಾಕ್ಟರ್ ಚಾಲಕ ಇದು ಮಾರಾಟಕ್ಕಲ್ಲಾ ಸಾರ್, ನಮ್ಮ ಸ್ವಂತ ಕೆಲಸಕ್ಕೆ ಊರಿಂದ ತರ್ತಿದ್ದೇನೆ ಸಾರ್ ನನ್ನ ಹತ್ತಿರ ದುಡ್ಡಿಲ್ಲಾ ಬಿಟ್ಬಿಡೀ ಸಾರ್ ಎಂದು ಬೇಡಿದರೂ ಟ್ರಾಕ್ಟರ್ ಸ್ಟೇಷನ್ ಗೆ ತೆಗೆದುಕೊಂಡು ಹೋಗಿದ್ದರೆ ಎಂದು ತಿಳಿದು ಬಂದಿದೆ.

 

ಟ್ರಾಕ್ಟರ್ ಮಾಲಿಕ ಕೃಷ್ಣಪ್ಪ, ಮರುಳು ತಂದಿದ್ದು ಪಾಲ್ ಪಾಲ್ ದಿನ್ನೆ ಯಿಂದ ಪ್ಲಾನ್ ಸ್ಟೇಷನ್ ಗೆ. ಎಂಬ ಮಾಹಿತಿ.

LEAVE A REPLY

Please enter your comment!
Please enter your name here