ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ..

0
163

ವೀರಶೈವ ಲಿಂಗಾಯತ ಎರಡು ಒಂದೇ ಬಳ್ಳಿಯ ಹೂವುಗಳು ಇದ್ದಂತೆ , ಕಾಶಿ ಜಗದ್ಗುರು ಡಾ|| ಚಂದ್ರಶೇಖರ್ ಶಿವಾಚಾರ್ಯ

ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಹಿರೇ ಅಳ್ಳಗಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಜಗದ್ಗುರು ಡಾ|| ಚಂದ್ರಶೇಖರ್ ಶಿವಾಚಾರ್ಯರು ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಬಳ್ಳಿಯ ಹೂವುಗಳು, ಅವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ . ಧರ್ಮವನ್ನು ಬಡೆಯುವಂತಹ ಬೆಳವಣಿಗೆ ನಡೆಯುತ್ತಿದ್ದ ಧರ್ಮವನ್ನು ಒಡೆಯದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಪ್ರಚಾರ ಮಾಡಿದ್ದಾರೆ, ವೀರಶೈವ ಸ್ವತಂತ್ರ ಧರ್ಮವಾಗಿದ್ದು ವಿಶ್ವಗುರು ಬಸವಣ್ಣ ಎಲ್ಲಿಯೂ ಲಿಂಗಾಯತ ಪದ ಪ್ರಯೋಗ ಮಾಡಿಲ್ಲ ಎಂದು ಕಾಶಿ ಜಗದ್ಗುರು ಡಾ|| ಚಂದ್ರಶೇಖರ್ ಶಿವಾಚಾರ್ಯ ತಿಳಿಸಿದರು.

ನಂತರ ಮಾಶಾಳ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಗೌಡಪಾಟೀಲ ಮತ್ತು ಕರಜಗಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸುಗೌಡ ಕರೂಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಂತಲಿಂಗೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶ್ರಿ ಸಿದ್ದರಾಮ ಶಿವಾಚಾರ್ಯ ಚೌಡಾಪೂರ. ಶ್ರಿ ಚನ್ನಮಲ್ಲ ಶಿವಾಚಾರ್ಯ ಬಡದಾಳ. ಶ್ರಿ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಅಫಜಲಪೂರ. ಶ್ರಿ ಜಯಗುರುಶಾಂತಲಿಂಗಾರಾಧ್ಯ ಶಿವಾಚಾರ್ಯ ಹಿರೇ ಜೇವರ್ಗಿ. ಶ್ರೀ ರೇಣುಕ ಶಿವಾಚಾರ್ಯ ಅರ್ಜುಟಗಿ. ಶ್ರೀ ಶಿವರಾಜೇಂದ್ರ ಶಿವಾಚಾರ್ಯ ಹಿಂಚಗೇರಿ. ಶ್ರೀ ಕೈಲಾಸಲಿಂಗ ಶಿವಾಚಾರ್ಯ ಹಿರೇ ಗೌರ. ಶ್ರೀ ಗುರು ಬಸವ ಶಿವಾಚಾರ್ಯ ಅತನೂರ. ಬಾಬುಗೌಡ ಪಾಟೀಲ. ಪಿ.ಎಸ್.ಆಯ್.ಸಿದ್ದರಾಯ ಭೋಸಗಿ. ಶ್ರೀ ಎಸ್.ವಾಯ್.ಪಾಟೀಲ. ಶರಣಗೌಡ ಗಣೀಕಲ್.ದತ್ತು ಶಿವಯೋಗೆಪ್ಪ ಸಾಲೋಟಗಿ.ಶ್ರೀ ಭಿಮನಗೌಡ ಬಗಲಿ.ಶ್ರೀದತ್ತು ಹಿಂದಿನಮನಿ.ಪತ್ರಕರ್ತ ಶಕೀಲ ಚೌದರಿ ಸೇರಿದಂತೆ ಇವರೆಲ್ಲರನ್ನು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸನ್ಮಾನಿಸಿ ಆರ್ಶಿವಚನ ನೀಡಿದರು

LEAVE A REPLY

Please enter your comment!
Please enter your name here