ಅತಿಶೀಘ್ರದಲ್ಲಿ ಝೂಲಾಜಿಕಲ್ ಗಾರ್ಡನ್ ಆರಂಭ

0
203

ಬಳ್ಳಾರಿ /ಹೊಸಪೇಟೆ:ತಾಲ್ಲೂಕಿನ ಕಮಲಾ ಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಗಾರ್ಡನ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮೃಗಾಲಯಕ್ಕೆ ವನ್ಯ ಜೀವಿಗಳನ್ನು ಕರೆ ತರುವ ಕಾರ್ಯ ಸದ್ದಿಲ್ಲದೇ ಸಾಗಿದೆ.

ಈಗಾಗಲೇ ಬಳ್ಳಾರಿಯ ಮೃಗಾಲಯದಿಂದ ಸುಮಾರು 80 ಜಿಂಕೆ, 50 ಕೃಷ್ಣ ಮೃಗಗಳನ್ನು ಗಾರ್ಡನ್‌ಗೆ ಸ್ಥಳಾಂತರಿಸಲಾಗಿದ್ದು, ಈ ಪ್ರಾಣಿ ಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ನೈಸರ್ಗಿಕವಾಗಿ ಪ್ರಾಣಿಗಳಂತೆ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಬಿಳಿಕಲ್ಲು ಸಂರಕ್ಷಿತ ಅರಣ್ಯ ಪ್ರದೇಶದ ಪಶ್ಚಿಮ ಭಾಗದ 149.51 ಹೆಕ್ಟೇರ್ ಪ್ರದೇಶದ ದರೋಜಿ ಕರಡಿ ಧಾಮಕ್ಕೆ ಹೊಂದಿ ಕೊಂಡು ತಲೆ ಎತ್ತಿರುವ ಬೃಹತ್ ಮೃಗಾಲಯ, ಇದೀಗ ಪರಿಸರ ಪ್ರವಾಸೋಧ್ಯಮಕ್ಕೆ ಪ್ರಶಸ್ತ ಎನ್ನಿಸಿದೆ.

ಈಗಾಗಲೇ, ಕೇಂದ್ರ ಮೃಗಾಲಯ ಪ್ರಾಧಿಕಾರವು ನಾಲ್ಕು ಹುಲಿಗಳನ್ನು ಈ ಮೃಗಾಲಯದಲ್ಲಿ ಇರಿಸಿಕೊಳ್ಳುವ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡಿದ್ದು, ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳು ತಮ್ಮಲ್ಲಿರುವ ಹೆಚ್ಚುವರಿ ಹುಲಿಗಳನ್ನು ಕಮಲಾಪುರದ ಮೃಗಾಲಯಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿವೆ.

ಆದರೆ, ಹುಲಿ,ಕರಡಿ ಸಫಾರಿ, ಆನೆ ಸಫಾರಿ ಸಫಾರಿಗಾಗಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರವಾಸಿಗರು ಇನ್ನೂ ಸ್ವಲ್ಪ ದಿನ ಕಾಯಬೇಕಿದೆ.

ಮುಂದಿನ ದಿನಗಳಲ್ಲಿ, ನಾಲ್ಕು ನೀಲ್ ಗಾಯ್, ನಾಲ್ಕು ಸಾಂಬಾರ್ ಮತ್ತು ಆರು ಕೊಂಡ ಕುರಿಗಳನ್ನು ಮೃಗಾಲಯಕ್ಕೆ ತಂದು ಸಸ್ಯಹಾರಿ ಪ್ರಾಣಿಗಳ ಸಫಾರಿ ನವಂಬರ್ ತಿಂಗಳಲ್ಲಿ ಆರಂಭಿಸಲು ಚಿಂತನೆ ನಡೆಸಿದೆ. ಕಳೆದ ಒಂದೂವರೆ ವರ್ಷದಿಂದ ಮೃಗಾಲಯ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕಮಲಾಪುರದ ಗಂಡುಗಲಿ ಕುಮಾರರಾಮ ಯುವಸೇನೆ ಮತ್ತು ಜನಸಂಗ್ರಾಮ ಪರಿಷತ್‌ ವತಿಯ ಸತತ ಹೋರಾಟದ ಫಲವಾಗಿ, ಮೃಗಾಲಯ ನಿರ್ಮಾಣ ಕಾಮಗಾರಿ ಆರಂಭ ಗೊಂಡು ಸಿದ್ದತೆಗಳು ಭರದಿಂದ ಸಾಗಿವೆ. ಈಗಾಗಲೇ, ಕೇಂದ್ರ ಮೃಗಾಲಯ ಪ್ರಾಧಿಕಾರವು ನಾಲ್ಕು ಹುಲಿಗಳನ್ನು ಈ ಮೃಗಾಲಯದಲ್ಲಿ ಇರಿಸಿಕೊಳ್ಳುವ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡಿದ್ದು, ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳು ತಮ್ಮಲ್ಲಿರುವ ಹೆಚ್ಚುವರಿ ಹುಲಿಗಳನ್ನು ಕಮಲಾಪುರದ ಮೃಗಾಲಯಕ್ಕೆ ಕಳುಹಿಸಲು ಒಪ್ಪಿಕೊಂಡಿವೆ. ಆದರೆ, ಹುಲಿ,ಕರಡಿ ಸಫಾರಿ, ಆನೆ ಸಫಾರಿ ಸಫಾರಿಗಾಗಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರವಾಸಿಗರು ಇನ್ನೂ ಸ್ವಲ್ಪ ದಿನ ಕಾಯಬೇಕಿದೆ.

LEAVE A REPLY

Please enter your comment!
Please enter your name here