ಅದೃಷ್ಟವಂತ..ಅಪ್ಪಾಜಿಗೌಡ

0
168

ಮಂಡ್ಯ/ಮಳವಳ್ಳಿ: ಸ್ವಾತಂತ್ರ್ಯ ದಿನದಂದೇ ಹುಟ್ಟಿದ ಬಿಜೆಪಿ ಮುಖಂಡನಿಗೆ ಅಭಿಮಾನಿಗಳು ಹಾಗೂ ಬಿಜೆಪಿ ತಾಲ್ಲೂಕು ಘಟಕ ಹುಟ್ಟುಹಬ್ಬವನ್ನು ಆಚರಿಸಲಾಯಿತು, ಮಳವಳ್ಳಿ ಪಟ್ಟಣದ ಗಂಗಾದೇಶ್ವರ ದೇವಸ್ಥಾನದ ಮುಂಬಾಗ ನಿಷ್ಟಾವಂತ ಬಿಜೆಪಿ ಮುಖಂಡ ಅಪ್ಪಾಜಿಗೌಡ ರವರ 71 ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು

ಇದೇ ಸಂದಭ೯ದಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು ಮಾತನಾಡಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಉಳಿದಿರುವುದು ಅಪ್ಪಾಜಿಗೌಡ ರವರ ನಿಷ್ಠೆಯಿಂದ ಎಂದರೆ ತಪ್ಪಾಗಲಾರದು ರಾಜ್ಯ ಮಟ್ಟದ ನಾಯಕರ ಆಶೀರ್ವಾದ ವಿದ್ದರೂ ಉನ್ನತ ಪದವಿಯನ್ನು ಆಸೆ ಪಡೆಯದೆ ನಿಷ್ಟೆಯನ್ನು ತೋರಿದ ವ್ಯಕ್ತಿ. ಎಂದರು. ಕಾಯ೯ಕ್ರಮ ದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಯ ಕಾರ್ಯದರ್ಶಿ ಎಂ.ಹೆಚ್.ಕೆಂಪಯ್ಯ, ಮಹೇಶಕುಮಾರ್, ತಾಲ್ಲೂಕು ಬಿಜೆಪಿ ಅದ್ಯಕ್ಷ ಶಿವಸ್ವಾಮಿ, ಹಿಂದುಳಿದ ವರ್ಗ ದ ತಾಲ್ಲೂಕು ಅಧ್ಯಕ್ಷ ಮಂಜುಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಂ.ಎನ್ ಕೃಷ್ಣ, ವೇಣು , ರಾಜು ನಗರದ ಅಧ್ಯಕ್ಷ ರಾಜೀವ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here