ಅಧಿಕಾರಿಗಳ ನಕಲಿ ಸೀಲ್ ಅಂಡ್ ಸಿಗ್ನೇಚರ್ ಬಳಸಿ ನಿವೇಶನಗಳ ನೊಂದಣಿ

0
632

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ರಾಜ್ಯದ ರಾಜಧಾನಿಗೆ ಹೊಂದಿಕೊಂಡಂತಿರುವ ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿ ನಲ್ಲಿ ಭೂಮಿಯ ಬೆಲೆ ಚಿನ್ನದ ಬೆಲೆ ಯಾಗಿದ್ದು ಸಾಕಷ್ಟು ಜನ ಬಂಡವಾಳಶಾಹಿ ಗಳಿಂದ ಹಗಲು ದರೋಡೆ ನಡೆಯುತ್ತಿದೆ. ಉಳಿಮೆ ಮಾಡಿ ಜೀವನ ಸಾಗುಸುತ್ತಿದ್ದ ರೈತರ ಜಮೀನುಗಳಿಗೆ ಸಂಚಕಾರ ಉಂಟಾಗಿದೆ. ಕಾರಣ ರೈತರಿಗೆ ಮೂರು ಕಾಸು ನೀಡಿ ನೆಪಮಾತ್ರಕ್ಕೆ ಜಮೀನು ಅಗ್ರಿಮೆಂಟ್ ಮಾಡಿಸಿಕೊಂಡು ಕೃಷಿ ಭೂಮಿ ಯನ್ನು ಯಾವುದೇ ರೀತಿಯ ಭೂಪರಿವರ್ತನೆ ಗೊಳಿಸದೆ ಬಡಾವಣೆ ನಿರ್ಮಾಣದ ಯಾವುದೇ ನಿಯಮ ನಿಭಂದನೆಗಳನ್ನೂ ಪಾಲಿಸದೆ ತಮ್ಮ ಮನಸೋ ಇಚ್ಚೆ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು,ಸಂಬಂಧಪಟ್ಟ ಕಂದಾಯಾಧಿಕಾರಿಗಳು ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೆ ಜಾಣಕುರುಡು ಪ್ರದರ್ಶನಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ಜನಸಾಮಾನ್ಯರಲ್ಲಿ ಹಲವು ಅನುಮಾನ ಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ಇತ್ತೀಚೆಗೆ ನಗರಕ್ಕೆ ಹೊಂದಿಕೊಂಡಂತಿರುವ ಕಂಟನ ಕುಂಟೆ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ಸರ್ವೆ ನಂಬರ್ 80/1 ರಲ್ಲಿನ ಎರಡು ಎಕರೆ ಕೃಷಿಭೂಮಿ ಯನ್ನು ರೈತರಿಂದ ಅಗ್ಗದೆ ಬೆಲೆಗೆ ಪಡೆದ ಡೆವಲಪರ್ ಗಳು ಭೂಮಿಯನ್ನು ಯಾವುದೇ ರೀತಿಯ ಪರಿವರ್ತನೆ ಗೊಳಿಸದೇಯೇ ನಿಯಮಬಾಹಿರವಾಗಿ ಎರಡು ಎಕರೆ ಭೂಮಿಯಲ್ಲಿ 56 ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡುತ್ತಿರುವುದು ಮತ್ತು ನಿವೇಶನಗಳಿಗೆ ಕಂಟನಕುಂಟೆ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಕಲಿ ಸೀಲು ಮತ್ತು ಸಹಿಯನ್ನು ಮಾಡಿ ಉಪನೊಂದಣಾಧಿಕಾರಿ ಗಳಿಂದ ನೊಂದಣಿ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ವಿಚಾರವಾಗಿ ತಾಲೂಕು ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ರವರಿಗೂ ಪಂಚಾಯ್ತಿ ಪಿಡಿಒ ಸುರೇಶ್ರ ಗಮನಕ್ಕೂ ತಂದರೂ ತಪ್ಪಿತಸ್ಥರ ವಿರುದ್ಧ ಇದುವರೆವಿಗೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೇ ಬದಲಿಗೆ ವಿಚಾರ ಪ್ರಸ್ತಾವನೆ ಮಾಡಿದ ತಪ್ಪಿಗೆ ಪತ್ರಕರ್ತರ ವಿರುದ್ದೇವೇ ಅಕ್ರಮದಾರರಿಗೆ ಮಾಹಿತಿ ನೀಡಿದ್ದಾರೆ. ಅವರ ಮಾತಿಗೆ ಕಿವಿಕೊಡದಿದ್ದ ಹಿನ್ನಲೆಯಲ್ಲಿ ಅವರಿವರಿಂದ ಹಿತೋಪ ದೇಶಗಳು, ದೂರವಾಣಿ ಬೆದರಿಕೆಗಳು,ಪುಡಿಪುಕ್ಕ ರಾಜಕಾರಣಿ ಗಳಿಂದ ಸಂಧಾನಗಳ ಫಲಿಸದೆ ಹಲವು ರೀತಿ ತೊಂದರೆಗೆ ಈಡುಮಾಡಲು ಮುಂದಾಗಿದ್ದಾರೆ.

ಇಷ್ಟೆಲ್ಲಾ ವಿಚಾರಗಳ ಸಂಪೂರ್ಣ ಮಾಹಿತಿ ಇದ್ದರೂ ತಾಲೂಕು ದಂಡಾಧಿಕಾರಿ ಮೋಹನ್ ರವರು ಮೌನವಹಿಸಿರುವುದು ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದ್ದು, ಬಲ್ಲ ಮೂಲಗಳಿಂದ ತಿಳಿದ ಮಾಹಿತಿ ಎಂದರೆ ಇದೇ ವಿಚಾರವಾಗಿ ಸ್ಥಳೀಯರ ದೂರುಗಳಿಗೆ ಸ್ಪಂದಿಸಿದ ಉಪ ವಿಭಾಗಾಧಿಕಾರಿಗಳಾದ ಮಹೇಶ್ ಬಾಬು ರವರು ಕೂಡಲೇ ಅನಧಿಕೃತ ಬಡಾವಣೆಯನ್ನು ತೆರೆವು ಗೊಳಿಸುವಂತೆ ತಹಶಿಲ್ದಾರರಿಗೆ ನಿರ್ಧೇಶನ ನೀಡಿದ್ದರೂ ಮೇಲಧಿಕಾರಿಗಳ ಮಾತಿಗೆ ಮೂರುಕಾಸಿನ ಬೆಲೆ ಕೊಡದೆ ಅತ್ತ ತಲೆಕೆಡೆಸಿಕೊಳ್ಳದ ಇವರಿಗೆ ಅಕ್ರಮ ದಾರರಿಂದ ಆದ ಲಾಭವೆಷ್ಟೋ ಎಂದು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಯಾವುದೇ ಕೈಬರಹದ ಖಾತಾ ಆಧಾರಿತ ನೊಂದಣಿ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶವಿದ್ದರೂ ಲೆಕ್ಕಿಸದ ಉಪನೊಂದಣಾಧಿಕಾರಿಗಳು ದಿನ ನಿತ್ಯ ನೂರಾರು ಸಂಖ್ಯಯಲ್ಲಿ ನೊಂದಣಿ‌ಮಾಡವುದು ಎಷ್ಟು ಸರಿ. ಒಂದು ವೇಳೆ ಅನಿವಾರ್ಯವಾಗಿ ನೊಂದಣಿ ಮಾಡಲೇ ಬೇಂಕೆಂದಲ್ಲಿ ನಿವೇಶನವಿರು ವ್ಯಾಪ್ತಿಗೆ ಬರುವಂತಹ ನಗರ,ಅಥವಾ ಗ್ರಾಮ ಪಂಚಾಯ್ತಿಯ ಅಧಿಕಾರಿಗಳಿಂದ ಅನುಮತಿ ಪಡೆಯುವುದರೊಂದಿಗೆ ಅಧಿಕೃತ ಸೀಲು,ಸಿಗ್ನೇಚರ್ ಸಹಿತ ದೃಡೀಕರಿಸಿ ನೊಂದಣಿ ಮಾಡಿದಲ್ಲಿ ಲಕ್ಷಾಂತರ ಹಣಕೊಟ್ಟು ಖರೀದಿಸುವವರಿಗೆ ಅಧಿಕೃತವಾಗಿ ನಿವೇಶನದ ಖಾತಾ ವಗೈರೆ ದೊರೆಯುವ ಅವಕಾಶ ವಿರುತ್ತೆ ಹೊರತು. ವಾಮ ಮಾರ್ಗದಲ್ಲಿ ಖರೀದಿಸುವವರಿಗೆ ಯಾವುದೇ ಮನೆಕಟ್ಟಲು ಅನುಮತಿ ಅಥವಾ ಬ್ಯಾಂಕ್ ಲೋನ್ ಪಡೆಯುವುದು ಅಸಾಧ್ಯ.

ಅಡ್ಡದಾರಿ ಹಿಡಿಯುತ್ತಿರುವ ನೊಂದಣಿ: ಸರ್ಕಾರದ ಆದೇಶ ಉಲ್ಲಂಘಿಸಿ ಕೈ ಬರಹದ ಖಾತಾಆಧಾರಿತ ನಿವೇಶನ ಅಥವಾ ಜಮೀನು ನೊಂದಣಿಯಿಂದ ಸಾಕಷ್ಟು ಅವಿಧ್ಯಾವಂತ ರೈತರ ಮತ್ತು ಜನ ಸಾಮಾನ್ಯರಿಗೆ ವಂಚನೆ ಸಂಭವಿಸುತ್ತಿದ್ದು ಅದರಲ್ಲೂ ದುಡ್ಡಿನ ಆಸೆಗೆ ಯಾರದ್ದೂ ನಿವೇಶನ ಯಾರಿಗೋ ಮಾಡಿಸಿ ನಾಲ್ಕು‌ಕಾಸಿನ ಬದಲಿಗೆ ನಲವತ್ತು ಕಾಸು ಮಾಡಿಕೊಳ್ಳುವ ಅಡ್ಡದಾರಿ ಹಿಡಿದ ಅದೆಷ್ಟೋ ಮದ್ಯವರ್ತಿ ಗಳು ಸರ್ಕಾರಿ ಭೂಮಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಕಮಾಯಿ ಮಾಡಿರುವ ಅನೇಕರು ಉದಾಹರಣೆಗೆ ಇದ್ದಾರೆ.

ಅಧಿಕಾರಿಗಳಿಗೆ ಇದೊಂದು ಕೊನೆಯ ಮನವಿ:
ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯಯನ್ನು ಬಗೆಹರಿಸದಿದ್ದಲ್ಲಿ ಸ್ಥಳೀಯ ಸಂಘಟನೆಗಳು ಮುಂದಿನ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ.

ಎಚ್ಚರ,ಎಚ್ಚರ,ಎಚ್ಚರ…

LEAVE A REPLY

Please enter your comment!
Please enter your name here