ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಗೆ ಅಪಾಯಕ್ಕೆ ಎಡೆ..

0
147

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಪುರಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಐದನೇ ವಾರ್ಡಿನ ಸಾರ್ವಜನಿಕರಿಗೆ ಅಪಾಯಕ್ಕೆ ಎಡೆ ಮಾಡಿಕೊಡುವಂತಿದೆ . ಈ ವಾರ್ಡ್ನ ವೆಂಕಟೇಶ್ ಅವರು ತಿಳಿಸಿದರು.ಇತ್ತೀಚೆಗೆ ಸುರಿದ ಭಾರಿ ಮಳೆಗೆ ಐದನೇ ವಾರ್ಡಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಮ್ಮ ವಾರ್ಡಿನ ಸಾರ್ವಜನಿಕರು ಪುರಸಭೆಯ ಗಮನಕ್ಕೆ ತಂದಾಗ ಸದರಿ ಪುರಸಭೆಯವರು ಜೆಸಿಬಿಯಿಂದ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ದೊಡ್ಡ ಡ್ರೈನೇಜ್ ತೆಗೆದು ಒಂದು ವಾರ ಕಳೆದಿದೆ .ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಸಾರ್ವಜನಿಕರು ಸುಮಾರು ಜನ ಬಿದ್ದು ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆ ಪಾಲಾಗುತ್ತಿದ್ದಾರೆ

. ಆದರೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ಸದಸ್ಯರು ಮತ್ತು ಸಾರ್ವಜನಿಕರು ಎಲ್ಲರೂ ಮಾಹಿತಿ ನೀಡಿದರೂ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು .
ಈ ಬಗ್ಗೆ ಅನೇಕ ಬಾರಿ ಪುರಸಭೆಯ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿದರೂ ಯಾವೊಬ್ಬ ಅಧಿಕಾರಿಯೂ ನಮ್ಮ ವಾರ್ಡಿಗೆ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಆಲಿಸುವಂತಹ ಪರಿ ಇಲ್ಲದಿರುವುದು ಅಧಿಕಾರಿಗಳು ಪುರಸಭೆಯಲ್ಲಿ ಇದ್ದಾರ ಇಲ್ಲವಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಐದನೇ ವಾರ್ಡಿನ ಸಾರ್ವಜನಿಕರು . ಮುಖ್ಯವಾಗಿ ಈ ಐದನೇ ವಾರ್ಡಿನ ಮುಖ್ಯ ರಸ್ತೆಯಲ್ಲಿ ಅರ್ಧ ರೋಡಿಗೆ ಕಾಲುವೆ ತೆಗೆದು ಅದನ್ನು ಮುಚ್ಚದೆ ಹಾಗೆಯೇ ಬಿಟ್ಟ ಪುರಸಭೆಯ ಅಧಿಕಾರಿಗಳು ಇತ್ತ ಅಧಿಕಾರಿಗಳ ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ .

LEAVE A REPLY

Please enter your comment!
Please enter your name here