ಅಧಿಕಾರಿಗಳ ನಿರ್ಲಕ್ಷ್ಯಜೀವಜಲ ಪೋಲು

0
249

ಮಂಡ್ಯ/ಮಳವಳ್ಳಿ: ರಾಜ್ಯ ವ್ಯಾಪ್ತಿ ಬರಗಾಲ ತಾಂಡವದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ. ಮಳವಳ್ಳಿ ಪುರಸಭೆ ಆಡಳಿತ ಮಾತ್ರ ಕುಡಿಯುವ ನೀರು ರಸ್ತೆಯಲ್ಲಿ ಸಲೀಸಾಗಿ ಹರಿಯಲು ಬೀಡುತ್ತಿದ್ದಾರೆ ಎಂದರೆ ನೀವು ನಂಬುತ್ತೀರಾ. ಇದು ಸತ್ಯ . ಕಳೆದ ಒಂದು ತಿಂಗಳಿನಿಂದ ಮಳವಳ್ಳಿ ನಗರದ ಮೈಸೂರು ಮುಖ್ಯರಸ್ತೆ ಅದರಲ್ಲೂ ಶಾಸಕ ಪಿ.ಎಂ ನರೇಂದ್ರಸ್ವಾಮಿರವರ ಕಚೇರಿ ಎದುರೇ ಪ್ರಸಂಗ ನಡೆದಿದ್ದು. ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗವಿರುವ ರಸ್ತೆಯಲ್ಲಿ ರಸ್ತೆಯ ಮಧ್ಯೆಯಲ್ಲಿ ಪೈಪ್ ಒಡೆದು ಒಂದು ತಿಂಗಳು ಕಳೆದರೂ ಅಧಿಕಾರಿಗಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡದೆ ಇರುವುದು ಶೋಚನೀಯ .ಈ ಭಾಗದ ಪುರಸಭೆ ಸದಸ್ಯೆಪತಿ ರಮೇಶ್ ರವರು ಈಘಟನೆ ಬಗ್ಗೆ ಮಾತನಾಡುತ್ತಾ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅವರ ಅನುಮತಿಗಾಗಿ ಉತ್ತರ ಬಂದ ತಕ್ಷಣ ಪೈಪ್ ರಿಪೇರಿ ಮಾಡಿಸಲಾಗುವುದು. ಎಂದರು. ಬೈಟ್: ರಮೇಶ. ಪುರಸಭೆ ಸದಸ್ಯೆ ರಶ್ಮಿರವರ ಪತಿ ರಮೇಶ್. ರಾಜ್ಯ ವ್ಯಾಪ್ತಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ. ಪುರಸಭೆ ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಕಳೆದ ಒಂದು ತಿಂಗಳಿಂದ ಪೈಪ್ ಹೊಡೆದು ನೀರು ಪೋಲಾಗುತ್ತಿದೆ. ಈ ಕೂಡಲೇ ಸರಿಪಡಿಸದ್ದರೆ ಜಯ ಕನಾ೯ಟಕ ಸಂಘಟನೆ ವತಿಯಿಂದ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಯ ಕನಾ೯ಟಕ ತಾಲ್ಲೂಕು ಅಧ್ಯಕ್ಷ ನಾಗೇಶ್ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here