ಅಧಿಕಾರಿಗಳ ವಿರುದ್ಧ ಶಾಸಕರು ಗರಂ..!?

0
129

ಚಿಕ್ಕಬಳ್ಳಾಪುರ/ಚಿಂತಾಮಣಿ: ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಆಗಮಿಸಿದ ಶಾಸಕರು ತಾವೇ ಗಬ್ಬು ನಾರುತ್ತಿದ್ದ ಸಿಸ್ಟನ್ ಸುತ್ತಲಿನ ಜಾಗವನ್ನು ಸ್ವಚ್ಛ ಮಾಡಿದ ಘಟನೆ ತಾಲ್ಲೂಕಿನ ಬೂರಗಮಾಕಲಹಳ್ಳಿಯಿಂದ ವರದಿಯಾಗಿದೆ.

ಸ್ವಚ್ಛತೆ ಕಡೆ ಗಮನ ಹರಿಸದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು, ಸನಿಕೆ ಹಿಡಿದು ತಾವೇ ಸಿಸ್ಟನ್ ಸುತ್ತ ಸ್ವಚ್ಛಗೊಳಿಸಲು ಮುಂದಾಗಿದ್ದು ಅಧಿಕಾರಿಗಳಿಗೆ ಮುಜುಕರಕ್ಕೀಡು ಮಾಡಿತು.ಸ್ವಚ್ಛ ಮಾಡಿಸಲು ಯೋಗ್ಯತೆ ಇಲ್ಲದ ಮೇಲೆ ನೀವ್ಯಾಕೆ ಪಿಡಿಒ ಗಳಾಗಿರಬೇಕು ಇಲ್ಲಿ, ಶುದ್ಧ ಅವಿವೇಕಿಗಳು ನೀವು ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು. ವ್ಯಕ್ತಪಡಿಸಿದರು. ಸಾಕಷ್ಟು ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ಕೊಟ್ಟಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.ನಾನು ಪರಿಶೀಲಿಸಲು ಇಲ್ಲಿ ಭೇಟಿ ನೀಡಿದಾಗ ಜನರನ್ನು ಯಾವ ರೀತಿ ಶೋಷಣೆ ಮಾಡ್ತಾರೆ ಎಂಬುದು ತಿಳಿಯಿತು. ರಾಜ್ಯ ಸರ್ಕಾರ ಇಂತಹ ಕೆಲಸಗಳಿಗಾಗಿ 1 ಲಕ್ಷ 80 ಸಾವಿರ ಕೋಟಿ ಬಜೆಟ್ ನೀಡಿದೆ. ಆದರೆ ಇಂತಹ ಅವಿವೇಕಿ ಪಿಡಿಒಗಳಿಂದ ಸರ್ಕಾರದ ಉದ್ದೇಶಗಳಿಗೂ ಹಿನ್ನಡೆ, ನಮಗೂ ತುಂಬಾ ಬೇಸರ ಮೂಡಿಸುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇವರ ನಿರ್ಲಕ್ಷ್ಯ ಕಂಡು ನಾನೇ ಮುಂದು ನಿಂತು ಸ್ವಚ್ಛತಾ ಕಾರ್ಯ ಮಾಡಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಬಿಲ್ ಮಾಡಿಕೊಡಲು ಹಲವರು ಬಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ದುಡ್ಡನ್ನೂ ಪಡೆದಿರುವ ಕುರಿತು ಕೆಲವು ಶಾಸಕರ ಬಳಿ ದೂರಿದರು. ಎಲ್ಲಾ ಕಡೆಯೂ ಶಾಸಕರೇ ಸ್ವಚ್ಛತೆ ಮಾಡಲು ಅಸಾಧ್ಯ ಹೌದಾದರೂ, ಸ್ವತಃ ಶಾಸಕರು ಸನಿಕೆ ಹಿಡಿದು ಸಿಸ್ಟನ್ ಸುತ್ತ ಕ್ಲೀನ್ ಮಾಡಿದ್ದನ್ನು ಕಂಡು ಸ್ವಚ್ಛತೆಗೆ ದಿವ್ಯ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳು ಇನ್ನು ಮುಂದಾದರೂ ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲು ಇದೊಂದು ಪಾಠವಾಗಬೇಕು.

LEAVE A REPLY

Please enter your comment!
Please enter your name here