ಅಧಿಕಾರಿಗಳ ಸಭೆ…

0
88

ಮಂಡ್ಯ/ಮಳವಳ್ಳಿ:ಜುಲೈ ತಿಂಗಳಿನಲ್ಲಿ ರೈತರ ಜಮೀನಿಗೆ ಮೊದಲ ಬೆಳೆ ನೀರು ಕೊಡಬೇಕು ಅಧಿಕಾರಿಗಳಿಗೆ ಶಾಸಕ ಡಾ.ಕೆ ಅನ್ನದಾನಿ ಖಡಕ್ ಆದೇಶ ನೀಡಿದರು.ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶಾಸಕ ಡಾ.ಕೆ ಅನ್ನದಾನಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಯಲ್ಲಿ ಮಾತನಾಡಿ,ತಾಲ್ಲೂಕಿನ ಅಭಿವೃದ್ಧಿಗೆ ಶಾಸಕರ ಜೊತೆ ಕೈ ಜೋಡಿಸಿ.ಇಲ್ಲದಿದ್ದರೆ ಹೊರಗೆ ಹೋಗುವಂತೆ ಅಧಿಕಾರಿಗಳಿಗೆ ಸೂಚನೆ.ನೀಡಲಾಯಿತು.
ಹಿಂದೆ ಇದ್ದ ಯೋಜನೆಗಳ ಜೊತೆ ಪ್ರ ಸುತ್ತ ಯೋಜನೆಗಳ ಪರಿಪೂರ್ಣವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ಇಲಾಖೆಯ ಶಾಸಕರಾಗಿ ತಿಂಗಳಾದರೂ ಅಧಿಕಾರಿಗಳು ಇದುವರೆಗೆ ಬೇಟಿಯಾಗದೆ ಇರುವ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿದ ಶಾಸಕ ಅನ್ನದಾನಿರವರು ಎಲ್ಲಾ ಇಲಾಖೆ ಅಧಿಕಾರಿಗಳು ಆಢಳಿತವನ್ನು ಚುರುಕುಗೊಳಿಸಬೇಕಾಗಿದೆ. ನೀರಾವರಿ ಇಲಾಖೆ , ತಾಲ್ಲೂಕು ಕಚೇರಿ, ಸಾರ್ವಜನಿಕ ಆಸ್ವತ್ರೆ,ಸಾಕಷ್ಟು ದೂರುಗಳು ಕೇಳಿಬಂದಿದೆ ಸರಿಪಡಿಸಿಕೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಾಲೆಗಳ ಕುಳು ಎತ್ತಿ ನಾಲೆಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಿ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ ಈ ಬಾರಿ ಕ್ಷೇತ್ರದ ಎಲ್ಲಾ ಭಾಗಗಳಿಗೂ ರೈತರು ಬೆಳೆಯುವ ಮೊದಲ ಬೆಳೆಗೆ ನೀರು ನೀಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ 24 ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗಳಿಗೆ 99700 ರೂ ರೂ ನೀಡಲಾಗಿದೆ. ಸಾಕೇತಿಕವಾಗಿ ಬಾಳೆಹೊನ್ನಿಗ ಕೃಷ್ಣ,5200 ರೂ, ಚಿಕ್ಕಸುಬ್ಬಯ್ಯ, .ಮತ್ತು ಮಹದೇವ 3200 ರೂ ಚೆಕ್ ಯನ್ನು ಶಾಸಕರು ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಚಂದ್ರಮೌಳಿ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೋಶಿ, ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here