ಅಧಿಕಾರಿಯೂ ಅಲ್ಲ,ರಾಜಕಾರಣಿಯೂ ಅಲ್ಲ. ಓನ್ಲೀ… ನೀರ್ದಾನಿ.

0
202

ಮಂಡ್ಯ,/ಮಳವಳ್ಳಿ: ರಾಜ್ಯದಲ್ಲಿ ಬರಗಾಲ ಎಷ್ಟರಮಟ್ಟಿಗಿದೆ ಎಂದು ತಿಳಿಯಬೇಕೇ ಹಾಗಾದರೆ ಬನ್ನಿ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮಕ್ಕೆ. ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವ ಜನರನ್ನು ನೋಡಿ. ತಾಲ್ಲೂಕಿನ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಅಂತ ಸುಳ್ಳುವರದಿ ನೀಡಿದ ಅಧಿಕಾರಿಗಳ ಬಣ್ಣ ಬಯಲಾಗಿದೆ. ತಾಲ್ಲೂಕು ಪಂಚಾಯಿತಿ ಕಾಯ೯ ನಿವಾ೯ಹಣಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಶಾಸಕರಿಗೆ ನೀಡಿದ್ದ ವರದಿ  ಸುಳ್ಳು ಎಂದು ಈ ವರದಿಯಿಂದ  ತಿಳಿಯುತ್ತೆ. ಗ್ರಾಮದಲ್ಲಿ ಪಂಚಾಯಿತಿ ಕಚೇರಿ ಇದ್ದರೂ ಕುಡಿಯುವ ನೀರಿನ ಸಮಸ್ಯ ಬಗ್ಗೆ ಕಳೆದ ಒಂದು ತಿಂಗಳಿನಿಂದ  ಗ್ರಾಮದ ಜನರು ಪರಿತಪಿಸುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು  ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ. ಜನರ ಸಮಸ್ಯೆಗೆ ಸ್ಪಂದಿಸದ ಅಡಳಿತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸದ  ಮನಗೊಂಡ ಗ್ರಾಮದ ಮುಖಂಡ ಶಿವಣ್ಣ ಸ್ವಂಪ್ರೇರಿತರಾಗಿ ತಮ್ಮ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು . ಗ್ರಾಮದ ಮಹಿಳೆಯರೆಲ್ಲಾ ನೀರ್ದಾನಿ ಶಿವಣ್ಣನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here