ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಎಂಟ್ರಿ…!

0
159

ಮಂಡ್ಯ/ಮಳವಳ್ಳಿ: ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಅಲೆ ಹಾಗೂ ಆಕಾಂಕ್ಷಿ ಪಟ್ಟಿ ಮಳವಳ್ಳಿ ವಿಧಾನ ಸಭೆ ಕ್ಷೇತ್ರ ಬೆಳೆಯುತ್ತಿದೆ.ಇಂದು ಅಧಿಕೃತವಾಗಿ ಕಳೆದ ಬಾರಿ ಕೆಜೆಪಿ ಪಕ್ಷ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪರವರ ಕಟ್ಟಾ ಬೆಂಬಲಿಗ ಮುನಿರಾಜು ಹಲಗೂರಿನ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕ್ಷೇತ್ರಕ್ಕೆ ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಹೊಸ ಬೆಳವಣಿಗೆಗೆ ಕಾರಣವಾಗಿದೆ.
ಹಲಗೂರು ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಊರಿನ ಮುಖಂಡರನ್ನು ಭೇಟಿ ಮಾಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದೇಶದಲ್ಲಿ ಬಿಜೆಪಿ ಪಕ್ಷವೂ ವ್ಯಾಪಕವಾಗಿ ಬೆಳೆಯುತ್ತಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಖಚಿತ. ಮಂಡ್ಯಜಿಲ್ಲೆಯಲ್ಲಿಯೂ ಸಹಾ 2. ರಿಂದ 3 ಜನ ಶಾಸಕರು ಆಯ್ಕೆಯಾಗುವುದು ಖಚಿತ ಅದರಲ್ಲೂ ಮಳವಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಗ್ಗೆ ಜನರಿಗೆ ಒಲವು ಹೆಚ್ಚಾಗಿದ್ದು ಯಾರೇ ಅಭ್ಯರ್ಥಿಯಾದರೂ ನಿಷ್ಟೆಯಿಂದ ದುಡಿದು ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಲು ಪಣತೊಡುವುದಾಗಿ ತಿಳಿಸಿದರು.
ನಂತರ ಹಲಗೂರು ಬಿಜೆಪಿ ಪಕ್ಷದ ಶಕ್ತಿ ಕೇಂದ್ರ ದ ಕಚೇರಿಗೆ ತೆರಳಿ ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ ರವರ ಜೊತೆ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಅಧ್ಯಕ್ಷ ಬಸವೇಗೌಡ,ರಾಜ್ಯ ರೈತಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರು ಸಿದ್ದರಾಜು, ಮುಖಂಡರಾದ ನಾಗೇಶ್ , ಮಹೇಶ , ಕೃಪ ಸೇರಿದಂತೆ ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here