ಅನಧಿಕೃತ ಟೆಂಡರ್…!?

0
76

ಚಾಮರಾಜನಗರ:ಕಾನೂನಿನಲ್ಲಿ ಅವಕಾಶವೇ ಇಲ್ಲದ ಯೋಜನಗೆ ಟೆಂಡರ್!ಕಾನೂನಿನಲ್ಲಿ ಅವಕಾಶವೇ ಇಲ್ಲದಂತಹ ಯೋಜನೆಯೊಂದಕ್ಕೆ ಅಧಿಕಾರಿಗಳು ಟೆಂಡರ್ ಕರೆದು ಗುತ್ತಿಗೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿವಮ್ಮ ರವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿ.ಆರ್.ಟಿ. ರಾಷ್ಟ್ರೀಯ ಹುಲಿ ಸಂರಕ್ಷಿತ ಸೂಕ್ಷ್ಮಪ್ರದೇಶದಲ್ಲಿ ಕ್ರಾಸ್ಡ್-ಬೇರಿಂಗ್ ಕಾಮಗಾರಿಯ ಪ್ರಗತಿ ಕುರಿತು ಪ್ರಶ್ನಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಬಿ.ಆರ್.ಹಿಲ್ಸ್ ವ್ಯಾಪ್ತಿಯಲ್ಲಿ ವಾಹನಗಳ ರಸ್ತೆ ಅಪಘಾತ ತಡೆಯಲು ಕ್ರಾಸ್ಡ್-ಬೇರಿಂಗ್ ನಿರ್ಮಾಣ ಕಾಮಗಾರಿ ನಡೆಸಲು ಮುಂದಾದಗ ವನ್ಯಜೀವಿಗಳ ಚಲನವಲನಕ್ಕೆ ಅಡೆತಡೆ ಉಂಟಾಗಲಿದೆ ಎಂದು ಅರಣ್ಯ ಇಲಾಖೆ ತಡೆಹಿಡಿಯಲಾಗಿದೆ ಎಂದು ಇಲಾಖಾಧಿಕಾರಿಗಳು ಹೇಳಿದರು.
ಕಾಯ್ದೆಯಲ್ಲಿ ಸೂಕ್ಷ್ಮ ವಲಯದಲ್ಲಿ ೩೦ ಕಿಮೀ ವೇಗಮಿತಿಯಿದೆ. ಆದರೆ, ಇದನ್ನು ಯಾರೂ ಪಾಲಿಸುತ್ತಿಲ್ಲ ಕಟ್ಟುನಿಟ್ಟಾಗಿ ವೇಗಮಿತಿಯನ್ನು ಪಾಲನೆ ಮಾಡಿದರೆ ಅಪಘಾತ ನಡೆಯುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದರು.
ಇನ್ನು, ಈ ಕುರಿತು ಲೋಕೋಪಯೋಗಿ ಅಧಿಕಾರಿಗಳನ್ನು ಜಿಪಂ ಸಿಇಒ ಹರೀಶಕುಮಾರ್ ಮತ್ತು ಉಪಾಧ್ಯಕ್ಷ ಗಿರೀಶ್ ತರಾಟೆಗೆ ತೆಗೆದುಕೊಂಡು ಕಾನೂನಿನಲ್ಲಿ ಅವಕಾಶವೇ ಇಲ್ಲದ್ದಕ್ಕೆ ಟೆಂಡರ್ ಹೇಗೆ ಕರೆದಿರಿ, ಗುತ್ತಿಗೆಯನ್ನು ಕ್ಯಾನ್ಸಲ್ ಮಾಡಿ ಎಂದು ಒತ್ತಾಯಿಸಿದರು….
ಇನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಬೋರ್ ವೆಲ್ ಕೊರೆಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ತಿಳಿಸಿದರು. ಈ ಕುರಿತು, ಬೋರ್ ವೇಲ್ ಕೊರೆಯುವ ಅವೈಜ್ಞಾನಿಕ ಕ್ರಮದ ಕುರಿತು ಸಿಇಒ ಪ್ರಸ್ತಾಪಿಸಿದ್ದಕ್ಕೆ ಭೂಗರ್ಭ ತಜ್ಞರ ವರದಿಯಂತೆ ಬೋರ್ ವೆಲ್ ಕೊರೆಸಲು ಮುಂದಾದರೆ ಕೆಲ ರೈತರು ಬಿಡದೇ ತೆಂಗಿನಕಾಯಿ ಇತರೆ ಸಾಮಾಗ್ರಿಗಳ ಮೂಲಕ ನೀರು ಪತ್ತೆ ಹಚ್ಚುವ ಮೂಢನಂಬಿಕೆಗೆ ಜೋತುಬಿದ್ದಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು…

ಕೃಷಿ ಇಲಾಖೆಯಲ್ಲಿ ಕೆಲವು ಅಭಿವೃದ್ಧಿ ಕೆಲಸ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲಾ ಹಾಗೂ ಸರ್ಕಾರಿ ಯೋಜನೆ ಗಳನ್ನು ರೈತರಿಗೆ ತಲುಪುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು…

ಉಳಿದಂತೆ ನರೇಗಾ ಯೋಜನೆಯಲ್ಲಿ ಜಿಲ್ಲೆ ತೀರಾ ಹಿಂದುಳಿದಿದೆ ಎಂದು ಕೃಷಿ ಅಧಿಕಾರಿ ಹಾಗೂ ಸಿಇಒ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಯೋಜನಾಧಿಕಾರಿ ಪದ್ಮಾಶೇಖರ್ ಪಾಂಡೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here