ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ

0
109

ಚಿಕ್ಕಬಳ್ಳಾಪುರ/ಚಿಂತಾಮಣಿ:ಸಮಾಜಸೇವಕ ಟಿ.ಸಿ ವೆಂಕಟೇಶ್ ರೆಡ್ಡಿ 56ನೇ ಹುಟ್ಟುಹಬ್ಬವನ್ನು ತಾಲ್ಲೂಕಿನ ಹೊರವಲಯದ ಬೂರಗಮಾಕಲಹಳ್ಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.

ನಂತರ ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದ ನಂತರ ನಗರದ ವೆಂಕಟಗಿರಿ ಕೋಟೆಯಲ್ಲಿನ ಶ್ರೀ ವಾಸವಿ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಚಾರಿಟಬಲ್ ಟ್ರಸ್ಟ್ ನಲ್ಲಿ ಅನಾಥ ಮಕ್ಕಳು ಮತ್ತು ವೃದ್ಧರ ಜೊತೆಯಲ್ಲಿ ಕೇಕ್ ಕಟ್ ಮಾಡಿ ಮಕ್ಕಳಿಗೆ ತಿನಿಸುವ ಮುಖಾಂತರ ತಮ್ಮ 56 ನೇ ಹುಟ್ಟು ಹಬ್ಬವನ್ನು ತಮ್ಮ ಕುಟುಂಬದ ಮತ್ತು ಕಾರ್ಯಕರ್ತರ ಜೊತೆ ಸರಳವಾಗಿ ಆಚರಿಸಿಕೊಂಡರು

ಈ ಸಂದರ್ಭದಲ್ಲಿ ಟಿ.ಸಿ ವೆಂಕಟೇಶ್ ರೆಡ್ಡಿ ಅವರ ಪುತ್ರ ಸಾಯಿ ವೃತ್ವೇಜ್ ರೆಡ್ಡಿ ,ಬಿಜೆಪಿ ವಿಭಾಗದ ಪ್ರಭಾರಿ ಶ್ರೀ ಸಚ್ಚಿದಾನಂದ ಮೂರ್ತಿ,ತಾಲ್ಲೂಕು ಅಧ್ಯಕ್ಷ ಆಂಜನೇಯ ರೆಡ್ಡಿ , ಸದಾಶಿವ ರೆಡ್ಡಿ ,ಕೊಟಗಲ್ ಪ್ರದೀಪ್ ,ಶಿವಣ್ಣ ,ರಮೇಶ್ ,ಶಿವ ರೆಡ್ಡಿ , ಭಾಗ್ಯಮ್ಮ , ಶ್ರೀನಿವಾಸ ,ವಿಶ್ವ ಸಾರ್ಥಿ ,ದುಪಮ್ ಪ್ರಸಾದ್ ,ಮತ್ತು ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here