ಅನುದಾನ ಅಭಿವೃದ್ಧಿಗೆ ಚಾಲನೆ…

0
132

ಬೆಂಗಳೂರು/ಕೆ ಆರ್ ಪುರ: ನಗರದ ಅರ್ಕಾವತಿ ಬಡಾವಣೆಯಲ್ಲಿ ಬರುವ 13 ಗ್ರಾಮಗಳ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ದಿ, ಆರ್.ಸಿ.ಸಿ.ಚರಂಡಿ, ಮಳೆನೀರು ಕಾಲುವೆ ಮತ್ತು ಅಡ್ಡಮೋರಿಗಳು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಸುಮಾರು 203 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕ ಬಿ.ಎ ಬಸವರಾಜ ತಿಳಿಸಿದ್ದಾರೆ.

ಕೆ ಆರ್ ಪುರ ಕ್ಷೇತ್ರದ ಚೇಳಕೆರೆ ಬಳಿಯ ಅರ್ಕಾವತಿ ಬಡಾವಣೆಯಲ್ಲಿ ಬಿ.ಡಿ.ಎ ಅನುಧಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಬಿಡಿಎ ನಿರ್ಮಿಸಿರುವ ಅರ್ಕಾವತಿ ಬಡಾವಣೆಯಲ್ಲಿ ಬರುವ 13 ಗ್ರಾಮದಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ನೀರು ಗಾಲುವೆಗಳು, ಚರಂಡಿ ಸೇರಿದಂತೆ ಇತರೆ ಸೌಲಭ್ಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸುಮಾರು 203 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ, ಈ ಕಾಮಗಾರಿಗಳು ನಮ್ಮ ಸರ್ಕಾರದ ಅವಧಿಯಲ್ಲಿಯೇ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ. ಅರ್ಕಾವತಿ ಬಡಾವಣೆಯಲ್ಲಿ ನಿವೇಶನಗಳನ್ನು ರಚನೆ ಮಾಡಿರುವ ಒಟ್ಟು ವಿಸ್ತೀರ್ಣ 606 ಎಕರೆ ಪ್ರದೇಶದಲ್ಲಿ 8730 ನಿವೇಶನದಾರರಿದ್ದು 90.64 ಕಿ.ಮೀ ಉದ್ದದ ರಸ್ತೆಗಳಿವೆ, ಇದರಲ್ಲಿ ಕೆಆರ್ಪುರ ವಿಧಾನಸಭಾ ಕ್ಷೇತ್ರಕ್ಕೆ 146 ಎಕರೆ 19 ಗಂಟೆ ವಿಸ್ತೀರ್ಣವಿದ್ದು 23.53 ಕಿ.ಮೀ ಉದ್ದದ ರಸ್ತೆಗಳು ಬರುತ್ತವೆ. ಅಲ್ಲದೆ ವ್ಯಾಪ್ತಿಯಲ್ಲಿ 2411 ನಿವೇಶನದಾರರು ನೆಲೆಸಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ನಿವೇಶನದಾರರು ವಾಸಿಸುವುದರಿಂದ ಮೂಲಭೂತ ಸೌಲಭ್ಯ ಕಲ್ಪಿಸಲು ಕಾಮಗಾರಿ ಕೈಗೊಳ್ಳಲಾಗಿದೆ. ಅಧಿಕಾರಿಗಳು ಗುಣ ಮಟ್ಟದ ಲ್ಲಿ ಅತೀ ಶೀಗ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿ.ಡಿ.ಎ ಅಧಿಕಾರಿಗಳಾದ ಡಾ. ಹರೀಶ್ ನಾಯಕ್, ವೆಂಕಟೇಶ್, ಮೋಹನ್, ಬಿ.ಡಿ.ಎ. ಸದಸ್ಯ ಜಗದೀಶರೆಡ್ಡಿ, ಪಾಲಿಕೆ ಸದಸ್ಯೆ ರಾಧಮ್ಮ, ಸಂಪತ್ ಕುಮಾರ್, ಕೆಆರ್ಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುನೇಗೌಡ, ಬಾಬುಸಾಬ್ಪಾಳ್ಯ ನರಸಿಂಹಮೂರ್ತಿ, ವಾರ್ಡ ಅಧ್ಯಕ್ಷರು ನಾರಾಯಣಸ್ವಾಮಿ, ಬಚ್ಚೆಗೌಡ, ಲೋಕೇಶ್ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here