ಅನುಮಾನಾಸ್ವದವಾಗಿ ಸಾವು.

0
276

ಬೆಂಗಳೂರು/ಹೂಸಕೋಟೆ : ಎರಡು ವರ್ಷದಿಂದ ಹತ್ತನೇತರಗತಿ ಹುಡುಗಿಯನ್ನು ಪ್ರೀತಿಸುತ್ತಿದ್ದ ಹುಡುಗ ಅನುಮಾನಾಸ್ವದವಾಗಿ ಸಾವು.
ಬೆಂ.ಗ್ರಾ. ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರದಲ್ಲಿ ಘಟನೆ. ಶಾಯಿಲ್ ಖಾನ್ (೨೪) ಸಾವನ್ನಪ್ಪಿದ ಯುವಕ.ಸುಫಿಯಾಖಾನ್ ಎಂಬ ಅಪ್ರಾಪ್ತ ಹುಡುಗಿಯನ್ನು ಪ್ರಿತಿಸುತ್ತಿದ್ದ ಯುವಕ, ಹುಡುಗಿ ಮನೆಯವರಿಗೆ ವಿಷಯ ತಿಳಿದು ಹುಡುಗಿಯನ್ನು ಶಾಲೆಗೆ ಕಳಿಸಲು ನಿರಾಕರಿಸಿದ್ದಾರೆ. ಹುಡುಗಿಯದ್ದು ಅದೇ ಬೈಲನರಸಾಪುರ ಗ್ರಾಮ ಆದರೆ ಹೊಸಕೋಟೆ ಯಲ್ಲಿ ಓದುತ್ತಿದ್ದಳು. ರಾತ್ರಿ ಸುಮಾರು ೮ ಘಂಟೆ ಸಮಯದಲ್ಲಿ ಹುಡುಗಿಯ ಮನೆ ಹತ್ತಿರ ಹೋಗಿ ಹುಡುಗಿಯನ್ನು ಆಚೆ ಬಾ ಎಂದು ಕರೆದಿದ್ದಾನೆ ಹುಡುಗಿಯ ಮನೆಯವರಿಗೆ ವಿಷಯ ಗೊತ್ತಿದ್ದ ಕಾರಣ ಹುಡುಗಿಯನ್ನು ಆಚೆ ಕಳಿಸಿಲ್ಲ ಆದರೂ ಹುಡುಗ ಹುಡುಗಿಯ ಮನೆಯ ಅತ್ತಿರಾನೇ ಇದ್ದಾನೆ ಆದರೆ ರಾತ್ರಿ ಸುಮಾರು ಒಂದು ಘಂಟೆ ಸಮಯದಲ್ಲಿ ಹುಡುಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here