ಅನೈತಿಕ ತಾಣವಾಯಿತೇ..ಹಂಪಿ?

0
622

ಬಳ್ಳಾರಿ/ಹೊಸಪೇಟೆ:ವಿಶ್ವ ವಿಖ್ಯಾತ ಹಂಪಿಬರ ಬರುತ್ತಾ ಅನೈತಿಕ ತಾಣವಾಗುತ್ತಿದೆಯಾ  ಎನ್ನುವ ಅನುಮಾನಗಳು ಮೂಡುತ್ತಿವೆ.ಕಾರಣ ನಿನ್ನೆಸಂಜೆ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿದೇಶಿ  ಪ್ರಜೆಯೊಬ್ಬ ತನ್ನ ಸಂಗಡಿಗರೊಂದಿಗೆ  ಮದ್ಯದ ಬಾಟಲಿ ಹಿಡಿದು ಕುಡಿಯುತ್ತಾ ದೇವಸ್ಥಾನದ ಪ್ರಾಂಗಣದಲ್ಲೇ ತಿರುಗಾಡುವುದು ಕಂಡು ಬಂತು. ಇನ್ನು ವಿರೂಪಾಕ್ಷ ದೇವಸ್ಥಾನದ ಪ್ರಮುಖ  ಗೋಪುರದ ಬಳಿಯಲ್ಲಿ ಸ್ಥಳೀಯ ಕಾವಲುಗಾರರುಮತ್ತು ಪೋಲಿಸ್ ಸಿಬ್ಬಂದಿಗಳು ಸಹಾ ನಿಯೊಜನೆ ಮಾಡಲಾಗಿರುತ್ತೆ.ಆದ್ರೆ ಹೀಗೆ ನಿಯೋಜನೆಗೊಂಡ  ಸಿಬ್ಬಂದಿಗಳು ಸರಿಯಾದ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಈರೀತಿಯಾಗಿ ವಿದೇಶಿಗರು ಸ್ವೇಚ್ಚಾಚಾರದಿಂದ ವರ್ತಿಸುವುದು ಈ ಹಿಂದಿನಿಂದಲೂ  ನಡೆಯುತ್ತಿದೆ.  ಇನ್ನು ಹೀಗೆ ಬಾಟಲಿ ಕೈಯಲ್ಲಿ  ಹಿಡಿದು ಕುಡಿಯುತ್ತಾ ದೇವಸ್ಥಾನದ ಆವರಣದಲ್ಲಿ  ಮತ್ತಿನಲ್ಲಿ ತುರುಗಾಡುತಿದ್ರೆ.ಕೆಲವು ಸ್ಥಳೀಯರು  ಆ ವ್ಯಕ್ತಿಗೆ  ಇಲ್ಲಿ ಮಧ್ಯಪಾನ ಸೇವಿಸುವುದು  ತಪ್ಪು ಇದು ಹಿಂದೂ ಧಾರ್ಮಿಕ ಸ್ಥಳಗಲ್ಲಿ ಪ್ರಮುಖ  ಸ್ಥಳ ಎಂದು ತಿಳಿಸಿದ್ರು ಸ್ಥಳೀಯರ ಮಾತಿಗೆ ಕಾಸಿನ  ಕಿಮ್ಮತ್ತನ್ನೂ ಕೊಡದೇ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಪ್ರಯತ್ನಿಸಿದ್ದಾನೆ ಆಗ ಸ್ಥಳಕ್ಕೆ  ಬಂದ ಸ್ಥಳೀಯ ಕಾವಲು ಗಾರ ಆ ವಿದೇಶಿ ಪ್ರಜೆಯನ್ನ  ದೇವಸ್ಥಾನದ ಹೊರ ಕಳುಹಿದ್ದಾನೆ.ಇನ್ನು ಇದನ್ನ  ಹೊರತು ಪಡಿಸಿದೇವಸ್ಥಾನಕ್ಕೆ ಬರುವ ವಿದೇಶಿ  ಮಹಿಳೆಯರು ಮತ್ತು ಪುರುಷರು ಅರೆ ಬೆತ್ತಲೆ ಬಟ್ಟೆಗಳನ್ನ ದರಿಸಿ ದೇವಸ್ಥಾನದ ಆವರದಲ್ಲಿ ಸುತ್ತಾಡುವುದು ಮತ್ತು ಕಾಲಿಗೆ ದರಿಸಿದ ಚಪ್ಪಲಿಯನ್ನ  ನಿಗದಿತ ಸ್ಥಳದಲ್ಲಿ ಬಿಡದೆ ಬೇಕಾ ಬಿಟ್ಟಿಯಾಗಿ ಕಾಲಿನಲ್ಲಿ ಹಾಕಿಕೊಂಡೇ ದೇವಸ್ಥಾನದ ಆವರಣದಲ್ಲಿಸಂಚರಿಸುವುದು ಇಲ್ಲಿಧಾರ್ಮಿಕ ಪಾವಿತ್ರತೆಗೆ ದಕ್ಕೆ  ಬರುತ್ತಿದೆ ಎನ್ನುವುದು ಕೂಡ ಕೆಲವು ಭಕ್ತರ ಅಭಿಪ್ರಾಯ.ಹಾಗಾಗಿ ಹಂಪಿ ದೇವಸ್ಥಾನಕ್ಕೆ ಬೇಟಿ ಕೊಡುವ ವಿದೇಶಿ ಪ್ರವಾಸಿಗರ ಮೇಲೆ ಇಲ್ಲಿನ  ದೇವಸ್ಥಾನದ ಆಡಳಿತ ಅಧಿಕಾರಗಳು ನಿಗಾವಹಿಸದೇ ಇರುವುದು ಇಂತಹ ಅನಾಚಾರಕ್ಕೆ  ಕಾರಣವಾಗಿದೆ.ಇನ್ನು ಹಂಪಿಯ ಕೂಗಳತೆದೂರದ ವಾಟರ್ ಪಾಲ್ಸ್ ನಲ್ಲಿ ಕೂಡಾ ವಿದೇಶಿಗರು  ಮಧ್ಯ  ಮಾಂಸ ಸೇವನೆಮಾಡುವುದನ್ನ ವರದಿಮಾಡುವ ಮುಖಾಂತ್ರ ಇಲ್ಲಿನ ಪರಿಸ್ಥಿತಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿಯೂ ಮುಂದುವರೆಯಬಹುದು ಎಂದು ಎಚ್ಚರಿಕೆಯ ಸುದ್ದಿಯನ್ನು ಮಾಡಲಾಗಿತ್ತು. ಹಾಗಿದ್ರು ಇಲ್ಲಿನ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ತೋರಿದ್ದೇ ಈ ಅನಾಚಾರಗಳಿಗೆ ನೇರ ಕಾರಣವಾಗಿದೆ.

LEAVE A REPLY

Please enter your comment!
Please enter your name here