ಅನ್ನಸಂತರ್ಪಣೆ ಕಾರ್ಯಕ್ರಮ…

0
160

ಮಂಡ್ಯ/ಮಳವಳ್ಳಿ:ಪುರಾತನ ಕಾಲದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಡೇ ಕಾರ್ತಿಕ ಸೋಮವಾರ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆಸಲಾಯಿತು.ಕಾರ್ಯಕ್ರಮಕ್ಕೆ ಕಲ್ಕುಣಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಿಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆಯಲು ಮುಗಿಬಿದ್ದರು. ಇದೇ ಸಂದರ್ಭದಲ್ಲಿ ಆಗಮಿಸಿದ ಭಕ್ತರಿಗೆ ದೇವಸ್ಥಾನ ದ ಮುಂಭಾಗದ ರಸ್ತೆಯಲ್ಲಿ ಅನ್ನಸಂತರ್ಪಣೆ ನಡೆಸಿದರು.ಕಾರ್ಯಕ್ರಮದ ಮಾಜಿ ಶಾಸಕ ಡಾ.ಕೆ ಅನ್ನದಾನಿ ,ತಾ.ಪಂ ಸದಸ್ಯ ನಟೇಶ್, ಗ್ರಾ.ಪಂ ಉಪಾಧ್ಯಕ್ಷ ಕುಮಾರ್, ಅನಂದಕಲ್ಕುಣಿ, ಮಾದೇಶ್,ಪ್ರಕಾಶ್, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಶಿವ ಪಾರ್ವತಿ ಸಮುದಾಯಭವನ ವನ್ನು ಶೀಘ್ರವೇ ಉದ್ಘಾಟಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here