ಅಪಘಾತಗಳ ತಪ್ಪಿಸಲು ರಸ್ತೆಗಿಳಿದ ವಿದ್ಯಾರ್ಥಿಗಳು

0
67

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಶಾಲೆಯ ಮುಂದೆ ವಾಹನಗಳ ಅತಿವೇಗ ಸಂಚಾರ ವಿದ್ಯಾರ್ಥಿಗಳಿಗೆ ಪ್ರಾಣಸಂಕಟ ಹಿನ್ನಲೆಯಲ್ಲಿ ಪೋಷಕರು ಶಾಲಾ ಮಕ್ಕಳಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಯಮ ಸ್ವರೂಪಿ ಹೆದ್ದಾರಿಯಲ್ಲಿ ಸ್ಪೀಡ್ ಹಂಪ್ಸ್ ಗಳನ್ನು ಅಳವಡಿಸುವಂತೆ ಆಗ್ರಹಿಸಿ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಚಿಂತಾಮಣಿ ಮತ್ತು ಕೋಲಾರ ರಸ್ತೆ ರಾಜ್ಯ ಹೆದ್ದಾರಿಯಲ್ಲಿ ಎರಡು ದಿನ ಹಿಂದೆಯೇ ಸ್ಕಾರ್ಪಿಯೊ ಮತ್ತು ದ್ವಿಚಕ್ರ ವಾಹನ ಅಪಘಾತ ಆಗಿತ್ತು ಅದರ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಭಯಬೀತರಾಗಿ ಶಾಲೆಯ ಮುಂದೆ ಯಾವುದೇ ಸ್ಪೀಡ್ ಹಂಪ್ಸ್ ಇಲ್ಲದ ಕಾರಣ ಮುಂದಿನಗಳಲ್ಲಿ ಆಗುವ ಅನಾಹುತಕ್ಕೆ ಈಗಲೇ ಎತ್ತಿಕೊಂಡು ಸ್ಪೀಡ್ ಹಂಪ್ಸ್ ಹಾಕುವಂತೆ ಪ್ರತಿಭಟನೆ ಮಾಡಿದರು.

ಮಾಹಿತಿ ತಿಳಿದ ತಕ್ಷಣವೇ ಗ್ರಾಮಾಂತರ ಪೊಲೀಸ್ ಸಿಪಿಐ ಬೈರಪ್ಪ ಮತ್ತು ಪಿಎಸ್ಐ ಲಿಯಾಕತ್ ಉಲ್ಲಾ ಪೋಷಕರಿಗೆ ಮನವೊಲಿಸಿ ಶಾಲೆ ಮಕ್ಕಳಿಗೆ ಶಾಲೆಗೆ ಕಳಿಸುವಂತೆ ಹೇಳಿ ಪ್ರತಿಭಟನೆ ಹಿಂಪಡೆಯಲು ಹೇಳಿದರು. ನಂತರ ಶಾಲೆಯ ಮುಖ್ಯುಶಿಕ್ಷಕಿ ವಸಂತಕುಮಾರಿ ಅವರಿಗೆ ಪಿಎಸ್ಐ ಲಿಯಾಕತ್ ಉಲ್ಲಾ ಕರೆಸಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಲು ಅನುಮತಿ ಪಡೆಯಬೇಕು ಅದಕ್ಕಾಗಿ ಶಾಲೆಯ ಮಕ್ಕಳಿಗೆ ತಾವು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಕ್ಕೆ ನಿಮ್ಮ ಮೇಲೆ ಕಾನೂನು ರೀತಿಯಾಗಿ ಕೇಸ್ ಬುಕ್ ಮಾಡುವುದಾಗಿ ಪಿಎಸ್ಐ ಬೆದರಿಕೆ ಹಾಕಿದ್ದರು.
ಶಿಕ್ಷಕಿಯ ಮೇಲೆ ಪೊಲೀಸರ ಬೆದರಿಕೆ ಹಾಕಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here