ಅಪ್ಪ ಕಲಿತ ಶಾಲೆಗೆ, ಅಪಾರ ಕೊಡಿಗೆ..

0
266

ಮಂಡ್ಯ/ಮಳವಳ್ಳಿ: ಹೆತ್ತ ತಂದೆತಾಯಿಯನ್ನೇ ಮರೆಯುವ ಈ ಕಾಲದಲ್ಲಿ ತನ್ನ ತಂದೆ ಹುಟ್ಟಿ ಬೆಳೆದ. ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ . ಯಾರು ಆ ವ್ಯಕ್ತಿ ನೋಡಬೇಕೆ ಬನ್ನಿ. ಮಳವಳ್ಳಿ ತಾಲ್ಲೂಕು ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ದಿವಂಗತ. ಮೇಯರ್ ಜೆ ,ಲಿಂಗಯ್ಯ ನವರಪುತ್ರ ಕ್ಯಾಪ್ಟನ್ ಲಿಂಗರಾಜು. ಇವರು ಕಳೆದ 15 ವಷ೯ಗಳಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸಮವಸ್ತ್ರ ಇದಲ್ಲದೆ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಜ್ಣಾನ ಸಿಗಲಿ ಹಾಗೂ ರಾಷ್ಟ್ರ ಭಾಷೆ ಹಿಂದಿಯ ಶಿಕ್ಷಣ ಹಳ್ಳಿಯ ಮಕ್ಕಳಿಗೆ ದೊರಕಲಿ ಎನ್ನುವ ದೃಷ್ಟಿಯಿಂದ ಇಬ್ಬರು ಶಿಕ್ಷಕರನ್ನು ನೇಮಸಿ ಸಂಬಳ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಬಿಸಿಯೂಟ ತಯಾರಿಸುವ ಕೊಠಡಿಯನ್ನು ತನ್ನ ತಂದೆ ಮಾಜಿ ಮೇಯರ್ ಲಿಂಗಯ್ಯ ಹೆಸರಿನಲ್ಲಿ ಕಟ್ಟಿಸಿಕೊಟ್ಟಿದ್ದು. ಕುಡಿಯುವ ನೀರಿಗಾಗಿ ಕ್ಯಾಪ್ಟನ್ ಲಿಂಗರಾಜು 60 ಸಾವಿರ ರೂ ವೆಚ್ಚದ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿದ್ದಾರೆ. ಶಾಲೆಯನ್ನೇ ದೇವಾಲಯದ ರೀತಿ ನೋಡುವ ಇವರ ಉದ್ಧೇಶ ಶ್ಲಾಘನೀಯ, ಕ್ಯಾಪ್ಟನ್ ಲಿಂಗರಾಜು ರಂತಹ ಜನ ಊರಿಗೆ ಒಬ್ಬರು ಇದ್ದರೆ ಸಾಕು, ಸಕಾ೯ರಿ ಶಾಲೆಗಳು ಮುಚ್ಚುವ ಮಾತೆ ಮಾಯವಾದೀತು ಎಂದು ಇಲ್ಲಿನ ಗ್ರಾಮಸ್ಥರು ಕ್ಯಾಪ್ಟನ್ ಲಿಂಗರಾಜು ರವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

LEAVE A REPLY

Please enter your comment!
Please enter your name here