ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯನಾಶ

0
353

ಬೀದರ್/ಬಸವಕಲ್ಯಾಣ: ಅಬಕಾರಿ ಇಲಾಖೆ ಮತ್ತು ಪೋಲಿಸ್ ಠಾಣೆಯಿಂದ ಪ್ರತ್ಯೇಕ ಕಡೆಗಳಲ್ಲಿ ದಾಳಿ ನಡೆಸಿ ವಿವಿಧ ಪ್ರಕಣಗಳಲ್ಲಿ ಜಪ್ತಿ ಪಡೆಸಿಕೊಂಡಿರುವ ಅಕ್ರಮ ಮದ್ಯ ನಾಶಪಡಿಸಲಾಗಿದೆ.
ಕಲಬುರಗಿ ಅಬಕಾರಿ ಜಂಟಿ ಆಯುಕ್ತರ ನಿರ್ಧೇಶನ ಹಾಗೂ ಬೀದರ್ ಅಬಕಾರಿ ಉಪ ಆಯುಕ್ತಕರ ಆದೇಶ ಮೇರೆಗೆ ಬೀದರ್ ಅಬಕಾರಿ ಉಪ ಅಧೀಕ್ಷಕ ನೇತೃತ್ವದ ಸಮಿತಿ ಸಮ್ಮುಖದಲ್ಲಿ ಇದುವರೆಗೆ ಮುಟ್ಟುಗೋಲು ಹಾಕಿಕೊಂಡಿರುವ ಅಬಕಾರಿ ವಸ್ತುಗಳನ್ನು ನಗರದ ಹೋರವಲಯದ ನಗರ ಸಭೆಗೆ ಸೇರಿರುವ ಖಾಲಿ ಜಾಗದಲ್ಲಿ ನಾಶಪಡಿಸಲಾಯಿತು.
1309 ಲೀಟರ ಮದ್ಯ, 306 ಲೀಟರ ಬಿಯರ್, 134. ಲೀಟರ ಕಳ್ಳಭಟ್ಟಿ ಸರಾಯಿ, 51. ಲೀಟರ ಸೇಂದಿ, 4. ಲೀಟರ ದೇಶಿದಾರು ನಾಶಪಡಿಸಲಾಗಿದೆ.
ಇಲ್ಲಿಯ ಅಬಕಾರಿ ನೀರಿಕ್ಷಕರಾದ ಜಾಫರ ಮಿಯ್ಯಾ ಪಟೇಲ್, ಕೆ.ಎಸ್ ರಾಜಶೇಖರ, ಕೆ.ಎಸ್.ಬಿ.ಸಿ.ಎಲ್ ಮ್ಯಾನೇಜರ್ ಖಾನ್, ಅಬಕಾರಿ ಉಪ ನಿರೀಕ್ಷಕರಾದ ರವಿಕುಮಾರ ಪಾಟೀಲ್, ನಾನಾಗೌಡ ಕೇರುರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here