ಅಭಯಕ್ಷರ ಹಾಲು ಹಬ್ಬ ಕಾರ್ಯಕ್ರಮ..

0
172

ಬೆಂಗಳೂರು/ಕೆ.ಆರ್.ಪುರ: ಗೋಸಂರಕ್ಷಣೆಯ ಅಂಗವಾಗಿ ರಾಷ್ಟ್ರಾದ್ಯಂತ ಆಯೋಜಸಿಲಾಗಿರುವ ಅಭಯಕ್ಷರ ಹಾಲು ಹಬ್ಬ ವಿಶೇಷ ಕಾರ್ಯಕ್ರಮವನ್ನು ಕೆಆರ್ಪುರದ ವಿಭೂತಿಪುರ ಮಠದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ತೀರ್ಥರು ಗೋಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರಾದ್ಯಂತ ಗೋಹತ್ಯೆಗೆ ನಿಷೇಧ ಹೇರುವ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜಾರಿಗೆ ತರಲು ನಾಗರಿಕರಿಂದ ಅವಹಾಲು ಪತ್ರಕ್ಕೆ ಸಹಿ ಹಾಕಿಸಿ ಗೋವಿಗೆ ಅಭಯ ನೀಡುವ ವಿಶೇಷ ಕಾರ್ಯಕ್ರಮವನ್ನು ಕೆಆರ್ಪುರದ ವಿಜ್ಞಾನ ನಗರದಲ್ಲಿರುವ ವಿಭೂತಿಪುರ ಮಠದಲ್ಲಿ ಆಯೋಜಿಸಲಾಗಿತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖೇನ ಅರಿವು ಮೂಡಿಸಿ, ದೇಸಿ ತಳಿಗಳಿಗೆ ಶ್ರೀಗಳು ಪೂಜೆ ನೆರವೇರಿಸಿದರು. ಈ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿ ಕಾರ್ಯಕ್ರಮದ ಉಸ್ತುವಾರಿವಹಿಸಿದ್ದರು. ಗೋ ರಕ್ಷಣೆ ಕುರಿತು ಮಾತನಾಡಿದ ರಾಘವೇಶ್ವರ ಶ್ರೀಗಳು ಸಂವಿಧಾನ ಕಾನೂನು ಅಥವಾ ಯಾವುದೇ ಧರ್ಮವೂ ಸಹಿತ ಗೋಹತ್ಯೆ, ಗೋ ಭಕ್ಷಣೆಯನ್ನು ಉಲ್ಲೇಖಿಸಿಲ್ಲ, ಪ್ರಕೃತಿ ಸಂಕುಲದಲ್ಲೇ ಅತ್ಯಂತ ಪ್ರಮುಖ ಜೀವಿಯಾದ ಗೋವಿನ ರಕ್ತದ ಹೊಳೆಹರಿವುದು ಸಮಂಜಸವಲ್ಲ ಪ್ರತಿಯೊಬ್ಬ ನಾಗರಿಕನೂ ಗೋ ರಕ್ಷಣೆಯ ದೀಕ್ಷೆ ತೊಡಬೇಕೆಂದರು.

ಬೈಟ್: ರಾಘವೇಶ್ವರ ಭಾರತೀ ತೀರ್ಥರು, ರಾಮಚಂದ್ರಾಪುರ ಮಠ.

ಕಾರ್ಯಕ್ರಮದ ಅಂಗವಾಗಿ ದೇಸಿ ಗೋವುಗಳ ಹಾಲು ವಿತರಿಸಲಾಯಿತು, ದೇಸಿ ತಳಿಯ ಆಹಾರ ಪದಾರ್ಥಗಳ ಮಳಿಗೆಗಳನ್ನು ಇರಿಸಿ ನೆರೆದಿದ್ದ ಸಾರ್ವಜನಿಕರಲ್ಲಿ ದೇಸಿ ಪದಾರ್ಥಗಳ ಮಹತ್ವದ ಅರಿವು ಮೂಡಿಸಿದರು. ಗೋ ರಕ್ಷಣೆಯ ದೀಕ್ಷೆ ತೊಟ್ಟ ಗೋ ಸೇನಾನಿಗಳು ಕೇಂದ್ರ ಮತ್ತು ರಾಜ್ಯ ಸಕರ್ಾರಕ್ಕೆ ಜನರಿಂದ ಸಹಿ ಹಾಕಿಸಿದ ಅಭಯಾಕ್ಷರ ಪ್ರತಿಗಳನ್ನು ರಾಘವೇಂದ್ರ ಶ್ರೀಗಳಿಗೆ ಹಾಗು ನೆರೆದಿದ್ದ ಜನರಿಗೆ ಪ್ರದಶರ್ಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಹಿಂದೂ ಸಂಪ್ರದಾಯದ ಮಹತ್ವದ ಕುರಿತು ವಿವರಿಸಿ, ರಾಘವೇಶ್ವರ ಶ್ರೀಗಳ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಬೈಟ್: ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವರು.

ಒಟ್ಟಾರೆ ಹಿಂದೂ ಸಂಪ್ರದಾಯದ ಪ್ರಮುಖ ಜೀವಿಯೇ ಆದ ಗೋವಿನ ಸಂರಕ್ಷಣೆಗೆ ರಾಘವೇಶ್ವರ ಶ್ರೀಗಳು ನಡೆಸುತ್ತಿರುವ ಕಾರ್ಯ ಜನ ಮನ್ನಣೆಗಳಿಸಿದ್ದು ರಾಜ್ಯದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here