ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ…

0
193

ಬೆಂಗಳೂರು/ಕೆ.ಆರ್.ಪುರ:- ಏಕಾಗ್ರತೆಯಿಂದ ಮಕ್ಕಳು ವ್ಯಾಸಾಂಗದಲ್ಲಿ ತೊಡಗಿಸಿಕೊಂಡು ಪ್ರಜ್ಞಾವಂತರಾಗುವಂತೆ ಸ್ಥಳಿಯ ಶಾಸಕ ಬಿ.ಎ.ಬಸವರಾಜ್ ಶಾಲಾ ಮಕ್ಕಳಿಗೆ ಸೂಚಿಸಿದರು ಕ್ಷೇತ್ರದ ಬಸನಪುರ ವಾರ್ಡಿನ ಮೇಡಿಹಳ್ಳಿ, ಶೀಗೆಹಳ್ಳಿ, ಗಾಯತ್ರಿ ಬಡಾವಣೆ ಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಸೀಗೆಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕು.ಸ್ಥಾಪನೆ ಮಾಡಿದರು.
ಸರ್ಕಾರಿ ಶಾಲೆಯಲ್ಲಿ ಸಹಿತ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳು ಅಡಿಗಿರುತ್ತಾರೆ ಅವರನ್ನು ಗುರುತಿಸುವ ಕಾರ್ಯ ಶಿಕ್ಷಕರು ಮಾಡ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಜಯಪ್ರಕಾಶ್, ವಾರ್ಡ್ ಅಧ್ಯಕ್ಷ ಅಂಜಿನಪ್ಪ, ಯುವ ಅಧ್ಯಕ್ಷ ರಾಕೇಶ್, ಮುಖಂಡರು ಉದಯ್ ಕುಮಾರ್, ಬಾಲಕೃಷ್ಣ, ಶಾಲೆಯ ಮುಖ್ಯೋಪಾಧ್ಯಾಯೆ, ಶಿಕ್ಷಕರು ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here