ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ..

0
220

ಬಳ್ಳಾರಿ:ಮಹಾನಗರ ಪಾಲಿಕೆಯ 24 ನೇ ವಾರ್ಡನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇಂದು ಚಾಲನೆ ನೀಡಲಾಯಿತು.

ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರು ಕೇಂದ್ರ ಸರ್ಕಾರದ ಬಹು ಜನಪ್ರಿಯ ಯೋಜನೆಯಾದ ಉಜ್ವಲಾ ಸ್ಕೀಮ್ ಅಡಿ ವಾರ್ಡಿನ ವಿವಿಧ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾರಾದರೂ ಅಧಿಕಾರಿಗಳು ಅಥವಾ ಬ್ರೋಕರ್ ಗಳು ಕೇಂದ್ರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಲಂಚ ಅಥವಾ ಇನ್ನಿತರೆ ಯಾವುದೇ ಆಮಿಷ ಕೇಳಿದರೆ ಕೂಡಲೇ ತಮ್ಮ ಗಮನಕ್ಕೆ ತರಬೇಕೆಂದರು.
ಇದೇವೇಳೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಭೂಮಿ ಪೂಜೆ ಹಾಗೂ ಶಂಖು ಸ್ಥಾಪನೆ ನೆರವೇರಿಸಿದರು.
ಮೇಯರ್ ವೆಂಕರಮಣ, ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು ಹಾಗೂ ನೂರಾರು ಕಾರ್ಯಕರ್ತರು ಈವೇಳೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here