ಅಮೂಲ್ಯವಾದ ಮತಗಳನ್ನು ಮಾರಿಕೊಳ್ಳ ಬೇಡಿ

0
359

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಹಣದ ಆಸೆಗೆ ತಮ್ಮ ಅಮೂಲ್ಯ ಮತಗಳನ್ನು ಮಾರಿಕೊಳ್ಳದೇ ವ್ಯೆಕ್ತಿತ್ವದ ಘನತೆಯನ್ನು ಉಳಿಸಿ ಬಹು ಜನರ ಹಿತಕ್ಕಾಗಿ ಬಿಎಸ್ ಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಮೊದಲ ಬಾರಿಗೆ
ಬಶೆಟ್ಟಹಳ್ಳಿಯಲ್ಲಿ ನಡೆದ
ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಸಂಯೋಜಕ ಹರಿರಾಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಪಕ್ಷವನ್ನು ತೊರೆದು ತಾಲ್ಲೂಕಿನ ಬಹಳಷ್ಟು ಜನರು ಬಿಎಸ್ ಪಿ ಪಕ್ಷದ ಸಿದ್ದಾಂತ ವನ್ನು ಒಪ್ಪಿ ಕನ್ನಪನಹಳ್ಳಿ ಯಾಮೇ ಗೌಡ ಮುಖಂಡತ್ವ ಹಾಗೂ ತಾಲ್ಲೂಕು ಸಂಯೋಜಕ ಬಶೆಟ್ಟಹಳ್ಳಿ ಮೂರ್ತಿ ನೇತೃತ್ವದಲ್ಲಿ ಸುಮಾರು 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಇದ್ದ ಶಿಡ್ಲಘಟ್ಟ ಪ್ಯಾರಾಜಾನ್,ಸೇರಿದಂತೆ ಸುಮಾರು 50 ಹಳ್ಳಿಗಳಿಂದ ಹಿರಿಯ ಮುಖಂಡರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಿಎಸ್ ಪಿ ಪಕ್ಷಕ್ಕೆ ಸೇರ್ಪಡೆಯಾದರು.

LEAVE A REPLY

Please enter your comment!
Please enter your name here