ಅಮ್ಮನವರಿಗೆ ವಿಶೇಷ ಅಲಂಕೃತ.

0
120

ದೇವನಹಳ್ಳಿ: ತಾಲ್ಲೂಕಿನಲ್ಲಿ ಇತ್ತಿಚಿನ ದಿನಗಳಲ್ಲಿ ಅತ್ಯಂತ ಪ್ರಸಿದ್ದಿ ಹೊಂದುತ್ತಿರುವ ದೇವಾಲಯ ಎಂದರೆ ಅದು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಾಸ್ಥಾನ. ಇದೀಗ ಅಮ್ಮನವರಿಗೆ ಆಷಾಢದ ಪ್ರಯುಕ್ತ ಪ್ರತಿ ವಾರ ವಿಶೇಷವಾದ ಅಲಂಕೃತ ಮಾಡಲಾಗುತ್ತಿದೆ. ಅರಿಶಿನ,ವಿಭೂತಿ,ಬೆಣ್ಣೆ ಮತ್ತು ವಿತರೆ ಪದಾರ್ಥಗಳಿಂದ ಪ್ರತಿ ವಾರ ಚೌಡೇಶ್ವರಿ ದೇವರ ವಿಗ್ರಹಕ್ಕೆ ಇಲ್ಲಿನ ಪುರೋಹಿತರು ವಿಶೇಷವಾಗಿ ಅಲಂಕಾರ ಮಾಡುತ್ತಿದ್ದು ಸಾವಿರಾರು ಭಕ್ತರ ಗಮನ ಸೆಳೆಯುತ್ತಿದ್ದಾರೆ. ಪ್ರತಿ ವರ್ಷವೂ ಸಹ ಆಷಾಡ ಮಾಸದಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ದೇವಾಲಯದ ಅಭಿವೃದ್ಧಿ ಟ್ರಸ್ಟ್ ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ರಾಜ್ಯ ಮತ್ತು ಹೊರ ರಾಜ್ಯದ ಭಕ್ತರಿಗೆ ದೇವಾಲಯದಲ್ಲಿ ತಂಗಾಲು ವಸತಿ ಮತ್ತು ಅನ್ನ ದಾಸೋಹ ಏರ್ಪಡಿಸಲಾಗುತ್ತದೆ.

LEAVE A REPLY

Please enter your comment!
Please enter your name here