ಅರಣ್ಯ ಇಲಾಖೆ ವತಿಯಿಂದ ಉಚಿತ ಗ್ಯಾಸ್ ವಿತರಣೆ

0
378

ಚಿಕ್ಕಬಳ್ಳಾಪುರ/ಗುಡಿಬಂಡೆ: ನಗರದ ತಾಲ್ಲೂಕು ಪಂಚಾಯಿತಿ  ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರಿ ಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರಿಗೆ ಉಚಿತ ಗ್ಯಾಸ್ ವಿತರಣೆ ಮಾಡುವ ಕಾರ್ಯಕ್ರಮವನಡೆಯಿತು.

ಈ ವೇಳೆ ಫಲಾನುಭವಿಗಳಿಗೆ ಗ್ಯಾಸ್ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರವು ದಲಿತರ ಅಭಿವೃದ್ಧಿಗಾಗಿ ಹತ್ತು  ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ವಿವಿಧ ಇಲಾಖೆಗಳಅಧಿಕಾರಿಗಳು  ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದರಲ್ಲಿಲೋಪವೆಸಗುವ ಅಧಿಕಾರಿಗಳ ನಡೆಯನ್ನು ಸಹಿಸುವುದಿಲ್ಲ. ಭೂರಹಿತರಿಗೆ  ಉಚಿತ ಭೂಮಿ ನೀಡುವುದು, ಸರ್ಕಾರ ನಿಮಗೆ ನೀಡುವ ಸೌಲಭ್ಯಕ್ಕೆ  ನೀವು ಯಾವುದೇ ರೀತಿಯ ಹಣ ನೀಡಬೇಕಾಗಿಲ್ಲ. ನಿಮ್ಮಿನ್ನು ಯಾರಾದರೂ ಹಣಕ್ಕಾಗಿ ಪೀಡಿಸಿದರೇ ಕೂಡಲೇ ನನಗೆ ತಿಳಿಸಿ ಅಂತಹವರಿಗೆ ಕಠಿಣ ಶಿಕ್ಷೆ ಆಗುವಂತಹ ಕೆಲಸ ಮಾಡುತ್ತೇನೆ ಎಂದರು. ಸೌದೆಯಲ್ಲಿ ಅಡುಗೆ ಮಾಡುವ ಮಹಿಳೆಯರು ಹೊಗೆ ಸೇವಿಸಿ ಉಸಿರಾಟದ ತೊಂದರೆ, ಶ್ವಾಸಕೋಶದ ತೊಂದರೆಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಅಡುಗೆ ಅನಿಲದ ಸ್ಟೌವ್ ಮತ್ತು ಸಿಲಂಡರ್‌ಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ವಲಯ ಅರಣ್ಯಾಧಿಕಾರಿ ರಾಮೇಗೌಡ ಸಿಲಿಂಡರ್ ಗ್ಯಾಸ್ ಒಲೆಗಳು ಮಹಿಳೆಯರು ಕಟ್ಟಿಗೆ ಬೆಂಕಿ ಹೊತ್ತಿಸಿ ಹೊಗೆಯಲ್ಲಿ ಕಣ್ಣೀರುಹಾಕಿ ಅಡುಗೆ ಮಾಡುವುದನ್ನು ತಪ್ಪಿಸುತ್ತವೆ. ಆದರೆ ಇವುಗಳನ್ನು ಬಳಸುವಾಗ ಎಚ್ಚರಿಕೆ  ವಹಿಸಬೇಕು. ಸಿಲಿಂಡರ್ ಗ್ಯಾಸ್ ಬಳಕೆಯಿಂದ ಕಾಡಿನಿಂದ ಕಟ್ಟಿಗೆ ತರುವುದನ್ನು ನಿಲ್ಲಿಸಿ ಅರಣ್ಯದ  ಅವಲಂಬನೆ ಕಡಿಮೆ ಮಾಡಬೇಕು. ಉರುವಲು ನೆಪದಲ್ಲಿ ಅರಣ್ಯ ಕಡಿಯುವುದರಿಂದ ಅರಣ್ಯವೂ ನಾಶವಾಗುತ್ತೆ. ಆದ್ದರಿಂದ ಅರಣ್ಯವನ್ನು ಉಳಿಸುವ ಉದ್ದೇಶದಿಂದ ಸರ್ಕಾರ  ಜನರಿಗೆ ಉಚಿತ ಗ್ಯಾಸ್  ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಇದೇ ವೇಳೆ ಶಾಸಕರ  ಕಛೇರಿ ಆವರಣದಲ್ಲಿ ಜನರಿಂದ ಅಹವಾಲುಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ  ಸ್ವೀಕರಿಸಿ ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು.  ನಂತರ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ವತಿಯಿಂದ ನಗರದ ಬೀದಿ ವ್ಯಾಪಾರಿಗಳಿಗೆ ತಲಾ ೧೦ ಸಾವಿರ ರೂಗಳ  ಪ್ರೋತ್ಸಾಹಧನ  ವಿತರಿಸಿದರು.

ಈ ವೇಳೆ ಜಿ.ಪಂ. ಸದಸ್ಯೆ ಗಾಯತ್ರಮ್ಮ ನಂಜುಂಡಪ್ಪ, ಪ.ಪಂ. ಅಧ್ಯಕ್ಷಚಂದ್ರಶೇಖರ ನಾಯ್ಡು, ಸದಸ್ಯರಾದ ರಮೇಶ್‌ಬಾಬು, ರಿಯಾಜ್,ಮುಖಂಡರಾದ ರಘುನಾಥರೆಡ್ಡಿ, ಎ.ವಿ.ಟಿ ನಾರಾಯಣಸ್ವಾಮಿ,ಕೃಷ್ಣೇಗೌಡ, ನರೇಂದ್ರ, ತಾ.ಪಂ. ಸದಸ್ಯ ರಾಮಾಂಜಿ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here